ಸೋಮವಾರಪೇಟೆ, ಸೆ. ೧೦: ಕೊಡ್ಲಿಪೇಟೆ ಭಾಗದ ವಿವಿಧ ಪಕ್ಷಗಳ ಕಾರ್ಯಕರ್ತರು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.
ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಗೋವಿಂದ್ರಾಜ್, ನಿವೃತ್ತ ಶಿಕ್ಷಕ ಕಾಳಯ್ಯ ಮಾಸ್ಟರ್, ರಾಜಯ್ಯ, ದೇವರಾಜ್, ಕೇಶವ ಸೇರಿದಂತೆ ಇತರರು ಬಿಜೆಪಿ ಪಕ್ಷ ಸೇರ್ಪಡೆಯಾದರು.
ಈ ಸಂದರ್ಭ ಪಕ್ಷದ ಮುಖಂಡರಾದ ಬಾಬು ರಾಜೇಂದ್ರ ಪ್ರಸಾದ್, ಕೆ.ಎಸ್. ನಾಗರಾಜು, ಪ್ರಸಾದ್ ಪಟೇಲ್, ಶರತ್ಚಂದ್ರ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೆ.ಜಿ. ಶಿವಕುಮಾರ್ ಅವರುಗಳು ಇದ್ದರು.