ಮಡಿಕೇರಿ, ಸೆ. ೧೦: ಜಿಲ್ಲೆಯ ಐತಿಹಾಸಿಕ ಶ್ರೀ ಓಂಕಾರೇಶ್ವರ ಹಾಗೂ ಆಂಜನೇಯ ದೇವಾಲಯಗಳಿಗೆ ಇಂದು ಕಾಶಿಯಿಂದ ಆಗಮಿಸಿದ್ದ ನಾಗಾಸಾಧುಗಳು ಎರಡೂ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಆರ್ಶೀವಾದ ನೀಡಿದರು. ಕಾಶಿಯ ದಿಗಂಬರ್ ಸ್ವಾಮಿ ನೇತೃತ್ವದಲ್ಲಿ ಒಟ್ಟು ೫ ನಾಗಾಸಾಧುಗಳು ಹಾಜರಿದ್ದರು. ಈ ಸಂದರ್ಭ ದೇವಾಲಯದ ಅರ್ಚಕರಾದ ಸಂತೋಷ್ ಭಟ್, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ಹಾಗೂ ಇತರರು ಹಾಜರಿದ್ದರು.