ವೀರಾಜಪೇಟೆ, ಸೆ. ೧೦: ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘವು ೨೦೨೪-೨೫ನೇ ಸಾಲಿನಲ್ಲಿ ರೂ ೧೪.೩೨ ಲಕ್ಷದಷ್ಟು ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಿರಿಲ್ ಮೊರಾಸ್ ಹೇಳಿದರು. ಸಂಘದ ೨೦೨೪-೨೫ನೇ ಸಾಲಿನ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಅವರು, ಸಂಘ ದಿನಾಂಕ ೩೧-೦೩-೨೦೨೫ಕ್ಕೆ ರೂ ೬೭.೧೪ ಲಕ್ಷದಷ್ಟು ಪಾಲು ಬಂಡವಾಳ ಹೊಂದಿದ್ದು ರೂ ೨೫.೫೪ ಕೋಟಿ ವಿವಿಧ ಠೇವಣಿಗಳನ್ನು ಸಂಗ್ರಹಿಸಿ, ರೂ ೨೪.೩೬ ಕೋಟಿಯಷ್ಟು ಠೇವಣಿಗಳನ್ನು ಮರುಪಾವತಿಸಿ ರೂ ೮.೯೧ ಕೋಟಿಯಷ್ಟು ಠೇವಣಿಗಳು ಇರುತ್ತವೆ. ಅಲ್ಲದೆ ೨೦೨೪-೨೫ನೇ ಸಾಲಿನಲ್ಲಿ ಒಟ್ಟು ರೂ ೬.೮೩ ಕೋಟಿಯಷ್ಟು ಸಾಲಗಳನ್ನು ವಿತರಿಸಿ ರೂ ೫.೬೮ ಕೋಟಿಯಷ್ಟು ಸಾಲಗಳನ್ನು ವಸೂಲಿ ಮಾಡಲಾಗಿ ವರ್ಷಾಂತ್ಯಕ್ಕೆ ೭.೪೭ಕೋಟಿಯಷ್ಟು ಸಾಲಗಳು ಹೊರಬಾಕಿ ಇರುತ್ತದೆ. ವರದಿ ಸಾಲಿನಲ್ಲಿ ತನ್ನ ಸದಸ್ಯರಿಗೆ ಶೇ.೧೦ ರಷ್ಟು ಡಿವಿಡೆಂಟ್ ಅನ್ನು ಘೋಷಣೆ ಮಾಡಲಾಗಿದೆ ಎಂಬುದಾಗಿ ತಿಳಿಸಿದರು.

ವರದಿ ಸಾಲಿನಲ್ಲಿ ಸಂಘದಲ್ಲಿ ಶೇ.೯೧.೦೪ ರಷ್ಟು ಪ್ರಮಾಣದ ಸಾಲ ವಸೂಲಿ ಮಾಡಲಾಗಿದ್ದು, ಹೆಚ್ಚಿನ ಸದಸ್ಯರು ತಾವು ಪಡೆದ ಸಾಲಗಳನ್ನು ಮರುಪಾವತಿ ಮಾಡುತ್ತಿದ್ದು, ಎಲ್ಲಾ ಸದಸ್ಯರು ತಾವು ಪಡೆದ ಸಾಲಗಳನ್ನು ಮರುಪಾವತಿ ಮಾಡಿದಲ್ಲಿ ಮಾತ್ರ ಠೇವಣಿದಾರರಿಗೆ ಠೇವಣಿಗಳನ್ನು ಮರುಪಾವತಿ ಮಾಡಲು ಸಾಧ್ಯವಾಗುವುದರಿಂದ, ಸುಸ್ತಿಯಿಲ್ಲದೆ ಸಾಲಗಳನ್ನು ಮರುಪಾವತಿ ಮಾಡಲು ಕರೆಯಿತ್ತರು. ಸಂಘದಲ್ಲಿ ನಿರಖು ಠೇವಣಿ ಪಿಗ್ಮಿ ಠೇವಣಿ, ಉಳಿತಾಯ ಠೇವಣಿ, ಮಿತವ್ಯಯ ಠೇವಣಿ ಇತ್ಯಾದಿಗಳನ್ನು ಸಂಗ್ರಹಿಸುತ್ತಿದ್ದು ಜಾಮೀನು ಸಾಲ, ಪಿಗ್ಮಿ ಒ.ಡಿ ಸಾಲ, ಅಡಮಾನ ಸಾಲ, ಆಭರಣ ಸಾಲ, ವಾಹನ ಸಾಲ, ವೇತನ ಸಾಲಗಳನ್ನು ವಿತರಿಸಲಾಗುತ್ತಿದೆ ಅಲ್ಲದೆ ಸಂಘದಲ್ಲಿ ಇ-ಸ್ಟಾಂಪ್, ನೆಪ್ಟ್, ಆರ್.ಟಿ.ಜಿ.ಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಸದಸ್ಯರು ಇದರ ಸದುಪಯೋಗ ಮಾಡಲು ಕೋರಿದರು.

ಸಂಘದ ಹಿರಿಯ ಸದಸ್ಯರು ಹಾಗೂ ಸಾಧಕರಾದ ಜೋಕಿಂ ವಾಸ್, ಡಾ.ಜೋಸ್ಸಿ ಪಿರೇರಾ ಹಾಗೂ ವಕೀಲ ಸಿ.ಟಿ ಜೋಸೆಫ್ ಅವರಿಗೆ ಸಭೆಯಲ್ಲಿ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಸಂಘದ ಸದಸ್ಯರ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಅಂತೋಣಿ ಕ್ಲೆöÊಮೆಂಟ್ ಸ್ವಾಗತಿಸಿ, ನಿರ್ದೇಶಕ ಬೆನೆಡಿಕ್ಟ್ ಸಲ್ದಾನ ಪ್ರಾರ್ಥಿಸಿದರು. ಎಸ್.ಎಂ. ಡಿಸಿಲ್ವಾರವರು ವಂದಿಸಿದರು.