ಮುಳ್ಳೂರು, ಸೆ. ೧೦: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮ ವತಿಯಿಂದ ಸಮೀಪದ ಹಾರೋಹಳ್ಳಿ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮದ ಅಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ಬಿ.ಕೆ. ಚಿಣ್ಣಪ್ಪ, ನಿಕಟಪೂರ್ವ ಅಧ್ಯಕ್ಷ ಆರ್.ವಿ. ಧರ್ಮಪ್ಪ, ಪರಮೇಶ್, ಸದಸ್ಯರಾದ ಶಂಕರ್, ಶಿವಕುಮಾರ್, ಚಂದ್ರಶೇಖರ್, ಸಂದೀಪ್, ಸುಹಾನ್ ಮುಂತಾದವರು ಹಾಜರಿದ್ದರು.