ಮಡಿಕೇರಿ, ಸೆ. ೧೦: ಜಿಲ್ಲೆಯಲ್ಲಿ ಸಿ ಆ್ಯಂಡ್ ಡಿ ಜಾಗದ ವಿಚಾರಕ್ಕೆ ಸಂಬAಧಿಸಿದAತೆ ಉದ್ಭವಿಸಿರುವ ಸಮಸ್ಯೆಯನ್ನು ಸರಕಾರ ಪರಿಹಾರ ಮಾಡಬೇಕೆಂದು ಮಾಜಿ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರುಗಳು ಆಗ್ರಹಿಸಿದ್ದಾರೆ.

ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಕೆಲವು ಸಿ ಆ್ಯಂಡ್ ಡಿ ಜಾಗವೆಂದು ಗುರುತಿಸಲಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್; ೧೯೯೧ರಲ್ಲಿ ವ್ಯವಸಾಯಕ್ಕೆ ಯೊಗ್ಯವಲ್ಲದ ಜಾಗವೆಂದು ಭೂಬ್ಯಾಂಕ್‌ಗೆ ಕೆಲವೊಂದು ಷರತ್ತುಗಳೊಂದಿಗೆ ನೆಡುತೋಪು ಬೆಳೆಸಲೆಂದು ಹಸ್ತಾಂತರ ಮಾಡಲಾಗಿತ್ತು. ನೀಡಿದ ಜಾಗವನ್ನು ಮರಳಿ ಕಂದಾಯ ಇಲಾಖೆಯ ವಶಕ್ಕೆ ಪಡೆಯುವಂತೆ ಷರತ್ತು ವಿಧಿಸಲಾಗಿತ್ತು. ಆದರೆ ಇದೀಗ ಅರಣ್ಯ ಇಲಾಖೆ ಷರತ್ತುಗಳನ್ನು ಉಲ್ಲಂಘಿಸಿ ಎಲ್ಲ ಜಾಗವನ್ನು ಅರಣ್ಯ ಪ್ರದೇಶವೆಂದು ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಒಂದು ಹೆಕ್ಟೇರ್‌ನಲ್ಲಿ ೫೦ ಮರಗಳಿದ್ದರೆ ಆ ಪ್ರದೇಶವನ್ನು ಡೀಮ್ಡ್ ಅರಣ್ಯವೆಂದು ಘೋಷಣೆ ಮಾಡುವಂತೆ ಸರ್ವೊಚ್ಚ ನ್ಯಾಯಾಲಯ ಹೇಳಿತ್ತು. ಆದರೆ, ತಾನು ಹಾಗೂ ಕೆ.ಜಿ. ಬೋಪಯ್ಯ ಸದನದಲ್ಲಿ ಧರಣಿ ಕುಳಿತು ಅದನ್ನು ಜಾರಿಗೊಳಿಸಲು ಅವಕಾಶ ನೀಡಲಿಲ್ಲ. ೪ಏಳನೇ ಪುಟಕ್ಕೆ ಇದೀಗ ೫೦-೬೦ ವರ್ಷಗಳಿಂದ ತಮ್ಮ ಸ್ವಾಧೀನದಲ್ಲಿರುವ, ಕೃಷಿ ಮಾಡಿಕೊಂಡು, ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಸಣ್ಣ ಬೆಳೆಗಾರರ ಜೀವನ ಬೀದಿ ಪಾಲಾಗಲಿದೆ. ಈಗಿನ ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಸದಸನದಲ್ಲಿ ವಿಚಾರ ಪ್ರಸ್ತಾಪ ಮಾಡಲು ಅವಕಾಶ ಸಿಗಲಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸರಕಾರ ಕಾನೂನು ರೀತಿಯಡಿ ಈ ಸಮಸ್ಯೆಯನ್ನು ಪರಿಹಾರ ಮಾಡಬೇಕಿದೆ. ಶಾಸಕ ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದಾರೆ. ಆದರೂ ಪ್ರಯತ್ನಿಸುತ್ತಿಲ್ಲ. ಜನರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲ. ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಎಲ್ಲವನ್ನೂ ಅರಣ್ಯ ಮಾಡಲು ಹೊರಟಿದ್ದಾರೆ

ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ; ಅರಣ್ಯ ಇಲಾಖಾಧಿಕಾರಿಗಳು ತಮಗೆ ಇಷ್ಟ ಬಂದAತೆ ಕಾನೂನು ರೂಪಿಸಿಕೊಳ್ಳುತ್ತಿದ್ದಾರೆ. ಕಂದಾಯ ಇಲಾಖೆಗೆ ಸೇರಿದ ಪೈಸಾರಿ ಜಾಗವನ್ನು ಫಾರೆಸ್ಟ್ ಪೈಸಾರಿ ಎಂದು ಹೊಸದಾದ ನಿಯಮ ಮಾಡಿಕೊಂಡಿದ್ದಾರೆ. ಸಿ ಆ್ಯಂಡ್ ಡಿ ಜಾಗವನ್ನು ಯಾವದೇ ಕಾರಣಕ್ಕೂ ಅರಣ್ಯವೆಂದು ಘೋಷಿಸಲಾಗದು. ಹಲವಾರು ವರ್ಷಗಳಿಂದ ಸಣ್ಣ ಬೆಳೆೆಗಾರರು ಈ ಜಾಗದಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು, ಅಕ್ರಮ ಸಕ್ರಮ ಯೊಜನೆಯಡಿ ಅರ್ಜಿ ಕೂಡ ಸಲ್ಲಿಸಿದ್ದಾರೆ. ಸಕ್ರಮಗೊಳಿಸುವ ಪ್ರಕ್ರಿಯೆ ವಿಳಂಬವಾಗಿದೆ, ಈ ನಡುವೆ ಅಧಿಕಾರಿಗಳು ಬೆಳೆಗಾರರಿಗೆ ನೋಟೀಸ್ ನೀಡುತ್ತಾ ಕಿರುಕುಳ ನೀಡುತ್ತಿರುವದು ಸರಿಯಲ್ಲವೆಂದು ಹೇಳಿದರು.

ಸೋಮವಾರಪೇಟೆ ತಾಲೂಕಿನಲ್ಲಿ ಅತ್ಯಧಿಕ ಹಾಗೂ ಮಡಿಕೇರಿ ತಾಲೂಕಿನ ಭಾಗಮಂಡಲ ಭಾಗದಲ್ಲಿನ ಜಾಗವನ್ನು ಅರಣ್ಯ ಮಾಡಲು ಹೊರಟಿದ್ದಾರೆ. ಈ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.