ಮಡಿಕೇರಿ, ಸೆ. ೧೧: ಕಣ್ಣು ಗಳಿಗೆ ಬಟ್ಟೆ ಕಟ್ಟಿ ಕೊಂಡು ೧ ಗಂಟೆ ಕಾಲಾವಧಿಯಲ್ಲಿ ೬೫೦ ಅಬಾಕಸ್ ಪ್ರಶ್ನೆಗಳನ್ನು ಉತ್ತರಿಸಿದ ಸಾಧನೆಗೆ ಎ.ಕೆ ಸುಪ್ರಿತ್ ಅಯ್ಯಪ್ಪ, ಆರ್.ಬಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ತಮಿಳುನಾಡಿನ ತಿರಚ್ಚಿಯಲ್ಲಿ ತಾ.೬ ರಂದು ಈ ದಾಖಲೆ ಮಾಡಿದ ಅಯ್ಯಪ್ಪ (೧೧), ಮೈಸೂರಿನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಮೂಲತಃ ಕೊಡಗು ಜಿಲ್ಲೆಯ ಕಿಕ್ಕರಳ್ಳಿ ಗ್ರಾಮದ ಇದೀಗ ಮೈಸೂರಿನಲ್ಲಿ ನೆಲೆಸಿರುವ ಅಜ್ಜಮಕ್ಕಡ ಕಾರ್ಯಪ್ಪ (ಕಾಶಿ) ಹಾಗೂ ಅಜ್ಜಮಕ್ಕಡ ಬೀನಾ ದಂಪತಿಯ ಪುತ್ರ.