ಮಡಿಕೇರಿ, ಸೆ. ೧೧ ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಶಾಂತಿನಿಕೇತನ ಬಡಾವಣೆಯಲ್ಲಿ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೪೭ನೇ ವರ್ಷದ ಗಣೇಶ ಮೂರ್ತಿಯ ವಿಸರ್ಜನೋತ್ಸವ ತಾ.೧೨ರಂದು(ಇAದು) ಭವ್ಯ ಶೋಭಾಯಾತ್ರೆಯೊಂದಿಗೆ ನಡೆಯಲಿದೆ.

ಸಂಜೆ ೬ ಗಂಟೆಗೆ ಶಾಂತಿನಿಕೇತನ ಬಡಾವಣೆಯಿಂದ ಶೋಭಾಯಾತ್ರೆ ಆರಂಭವಾಗಲಿದ್ದು, ಚಲನ ವಲನಗಳನ್ನೊಳಗೊಂಡ ಭವ್ಯ ಮಂಟಪದಲ್ಲಿ ಲೋಕ ಕಲ್ಯಾಣಕ್ಕಾಗಿ ಮಹಾಗಣಪತಿಯಿಂದ ದೈತ್ಯ ಶತಮಹಿಷಿಯ ಸಂಹಾರ ಮಾಡುವ ಪೌರಾಣಿಕ ಕಥಾಹಂದರವನ್ನು ಪ್ರಸ್ತುತುತಪಡಿಸಲಾಗುತ್ತದೆ.

ಆರ್.ಬಿ.ರವಿ ಕಥಾಸಾರಾಂಶ ಆಯ್ಕೆ ಮಾಡಿದ್ದು, ಸಂತೋಷ್ ಕಥಾ ಸಂಕಲನ ಮಾಡಿದ್ದಾರೆ. ಕಲಾವಿದ ರವಿ ಕಲಾಕೃತಿಗಳನ್ನು ರಚನೆ ಮಾಡಿದ್ದಾರೆ. ಇವರೊಂದಿಗೆ ವಿಶೇಷವಾಗಿ ಸುನಿಲ್, ಶೇಖರ್, ಹೇಮಂತ್, ಮನೋಜ್ ಕೈಜೋಡಿಸಿದ್ದಾರೆ. ವಿಜಯ್, ಅರುಣ, ವಿನು ಮತ್ತು ತಂಡದವರು ಚಲನ ವಲನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಬೆಂಗಳೂರಿನ ಮನಮೋಹಕ ಕೂಲ್ ಫಯರ್ ಆರ್.ಜೆ.ಈವೆಂಟ್‌ನವರು ಸ್ಟುಡಿಯೋ ಸೆಟ್ಟಿಂಗ್ಸ್ ಅಳವಡಿಕೆ ಮಾಡಿದ್ದಾರೆ. ದಿಂಡಿಗಲ್‌ನ ಲೈಟಿಂಗ್ ಬೋರ್ಡ್ ಇರಲಿದ್ದು, ಸ್ಕಂದ ತಂಡದವರ ಸೌಂಡ್ಸ್ ವ್ಯವಸ್ಥೆ ಇದೆ.

ಪ್ರದರ್ಶನ ಸ್ಥಳ

ಶೊಭಾಯಾತ್ರೆಯ ಮಂಟಪದ ಪ್ರಥಮ ಪ್ರದರ್ಶನ ಶಾಂತಿನಿಕೇತನ ಬಡಾವಣೆಯಲ್ಲಿ ನಡೆಯಲಿದೆ. ನಂತರ ಡಿಪೋ ಬಳಿ, ಜ.ತಿಮ್ಮಯ್ಯ ವೃತ್ತ, ನಗರ ಪೊಲೀಸ್ ಠಾಣೆ ಮುಂಭಾಗ, ಹಳೆ ಖಾಸಗಿ ಬಸ್ ನಿಲ್ದಾಣ, ಚೌಕಿ, ಚೌಡೇಶ್ವರಿ ದೇವಾಲಯದ ಬಳಿ ಪ್ರದರ್ಶನ ಇರಲಿದೆ ಎಂದು ಶಾಂತಿನಿಕೇತನ ಯುವಕ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.