ಸಿದ್ದಾಪುರ, ಸೆ. ೧೨: ವಿದ್ಯುತ್ ಸ್ಪರ್ಶಿಸಿ ಸಾವು ಬದುಕಿನ ನಡುವೆ ಚಡಪಡಿಸುತ್ತಿದ್ದ ಕೆಂದಳಿಲು ಮರಿಯನ್ನು ಯುವಕನೋರ್ವ ರಕ್ಷಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾಗಿದ್ದಾನೆ.

ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ನಲ್ವತ್ತೇಕರೆ ನಿವಾಸಿ ಸುಹೇಬ್ ಎಂಬ ಯುವಕ ಕೆಲಸದ ನಿಮಿತ್ತ ಸಮೀಪದ ಬರಡಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಪ್ರಾಣಿಯೊಂದು ಮೇಲಿನಿಂದ ನೆಲಕ್ಕೆ ಉರುಳಿದನ್ನು ಕಂಡಿದ್ದು, ಕೂಡಲೇ ಸ್ಥಳಕ್ಕೆ ತೆರಳಿದಾಗ ಕೆಂದಳಿಲು ಮರಿಯೊಂದು ವಿದ್ಯುತ್ ಸ್ಪರ್ಶಿಸಿ ನೆಲಕ್ಕೆ ಉರುಳಿ ಚಡಪಡಿಸುತ್ತಿರುವುದು ಕಂಡುಬAದಿದೆ. ಕೂಡಲೇ ಪ್ರಾಣಿಯನ್ನು ಹಿಡಿದು ನೀರು ಕುಡಿಸಿ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿದನು. ಅಲ್ಲದೆ ಅಸ್ವಸ್ಥವಾಗಿರುವ ಅಳಿಲು ಮರಿಯನ್ನು ಮನೆಗೆ ಕೊಂಡೊಯ್ದು ಆರೈಕೆ ಮಾಡಿ ಆರೋಗ್ಯ ಸುಧಾರಿಸಿದ ನಂತರ ಕಾಡಿಗೆ ಸುರಕ್ಷಿತವಾಗಿ ಬಿಡಲಾಯಿತು.