ಮಡಿಕೇರಿ, ಸೆ. ೧೨: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಯುವ ೪೭ನೇ ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

೨೩ ರಂದು ಮಕ್ಕಳ ದಸರಾ

ತಾ. ೨೩ ರಂದು ಮಕ್ಕಳ ದಸರಾ ನಡೆಯಲಿದೆ. ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೬.೩೦ ರ ತನಕ ಮಕ್ಕಳ ದಸರಾ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

೫ ವರ್ಷದಿಂದ ೧೫ ವರ್ಷದವರೆಗೆ ಮಕ್ಕಳ ಸಂತೆಗೆ ಒಂದು ತಂಡದಲ್ಲಿ ೧ ರಿಂದ ೩ ಮಕ್ಕಳು ಭಾಗವಹಿಸಬಹುದಾಗಿದೆ. ೫ನೇ ತರಗತಿಯಿಂದ ೭ನೇ ತರಗತಿ, ೮ನೇ ತರಗತಿಯಿಂದ ೧೦ನೇ ತರಗತಿ ವಿಭಾಗಕ್ಕೆ ಬಾಲಕ-ಬಾಲಕಿಯರ ವಿಭಾಗಕ್ಕೆ ನಿಧಾನವಾಗಿ ಸೈಕಲ್ ಚಾಲನೆ ಸ್ಪರ್ಧೆ ನಡೆಯಲಿದೆ.

೧ ರಿಂದ ೫ನೇ, ೬ ರಿಂದ ೭ನೇ, ೮ ರಿಂದ ೧೦ನೇ ತರಗತಿವರೆಗೆ ಗೋಣಿಚೀಲದ ಓಟ, ಸಾಂಸ್ಕೃತಿಕ ಸ್ಪರ್ಧೆ,

ಸಾಮೂಹಿಕ ನೃತ್ಯ, ಚಲನಚಿತ್ರಗೀತೆಗೆ ನೃತ್ಯ, ಜನಪದ ನೃತ್ಯ, ಛದ್ಮವೇಷ ಸ್ಪರ್ಧೆಗಳು ನಡೆಯಲಿವೆ.

ಇದರೊಂದಿಗೆ ೩ ರಿಂದ ೫ ವರ್ಷದವರಗೆ ಕೃಷ್ಣ ವೇಷ, ೬ ರಿಂದ ೧೦, ೧೦ ರಿಂದ ೧೫ ವರ್ಷದವರಿಗೆ ಪೌರಾಣಿಕ ವೇಷ ಸ್ಪರ್ಧೆ, ಮಣ್ಣಿನ ಮಾದರಿ ತಯಾರಿಕೆ ಸ್ಪರ್ಧೆ ಆಯೋಜನೆಯಾಗಲಿದೆ.

ಮಾಹಿತಿಗೆ ತಿರುನೆಲ್ಲಿಮಾಡ ಜೀವನ್, ಅಧ್ಯಕ್ಷರು, ೭೩೪೯೦೬೪೮೮೬ ವಾಮನ ಟಿ.ಕೆ, ಕಾರ್ಯದರ್ಶಿ ೭೬೧೯೨೭೦೫೨೯ ಅವರನ್ನು ಸಂಪರ್ಕಿಸಬಹುದಾಗಿದೆ.

೨೬ ರಂದು ಕವಿಗೋಷ್ಠಿ

ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ತಾ. ೨೬ ರಂದು ಆಯೋಜಿತವಾಗಿದೆ. ಬೆಳಿಗ್ಗೆ ೧೦ ಗಂಟೆಗೆ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ಗೋಷ್ಠಿ ನಡೆಯಲಿದೆ.

ಸಮಿತಿಯ ಅಧ್ಯಕ್ಷರಾಗಿ ಕೋಳೆರ ದಯಾ ಚಂಗಪ್ಪ, ಸಂಚಾಲಕರಾಗಿ ಎಸ್.ಎಂ ರಜನಿ, ಕಾರ್ಯದರ್ಶಿಯಾಗಿ ಶೀಲಾ ಬೋಪಣ್ಣ, ಸಹಕಾರ್ಯದರ್ಶಿಯಾಗಿ ಟಿ.ಅರ್ ವಿನೋದ್, ನಿರ್ದೇಶಕರಾಗಿ ಚಂದನಾ ಮಂಜುನಾಥ್, ಓಮನ, ಉಳುವಂಗಡ ಕಾವೇರಿ, ಜಗದೀಶ್ ಜೋಡುಬೀಟಿ, ಕೆ.ವಿ.ರಾಮಕೃಷ್ಣ, ಕಾವೇರಿ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಂಯೋಜಕ ಎಂ.ಕೆ.ಚAದನ್ ಕಾಮತ್, ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಕಾರ್ಯನಿರ್ವಹಿಸುತ್ತಾರೆ.

ಕವನಗಳನ್ನು ವಾಚನ ಮಾಡಲು ಆಸಕ್ತರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಒಂದು ಭಾಷೆಯ ಒಂದು ಕವನವನ್ನು ತಾ. ೧೭ ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಬೆಟ್ಟಕುರುಬ, ಜೇನುಕುರುಬ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆಯಾಳಂ, ತೆಲುಗು, ಮರಾಠಿ, ಸಂಸ್ಕೃತ ಭಾಷೆಯ ಕವನಗಳನ್ನು ಕಳುಹಿಸಿಕೊಡಬೇಕು. ಕನ್ನಡ ಭಾಷೆಯ ಚುಟುಕು ಕವನ(೪ ಸಾಲಿನ ಗರಿಷ್ಠ ೪ ಕವನಗಳಿಗೆ ಮಾತ್ರ ಅವಕಾಶ)ಗಳು. ವಿಶೇಷವಾಗಿ ಮಕ್ಕಳ ಕವನ(೬ ರಿಂದ ೧೩ ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ತಪ್ಪದೆ ಕಳುಹಿಸಿಕೊಡಬೇಕು. ಮಾಹಿತಿಗಳಿಲ್ಲದ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಕವನಗಳನ್ನು ಮತ್ತು ಮಾಹಿತಿಯನ್ನು ಅಧ್ಯಕ್ಷರು, ಗೋಣಿಕೊಪ್ಪಲು ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಕೇರಾಫ್ ಕಾಮತ್ ನವಮಿ, ಗೋಣಿಕೊಪ್ಪಲು.-೫೭೧೨೧೩ (ಕವನಗಳನ್ನು ಅಂಚೆ ಮೂಲಕ ಕಳುಹಿಸುವವರು ಲಕೋಟೆಯ ಮೇಲೆ ದೊಡ್ಡದಾಗಿ ‘ಗೋಣಿಕೊಪ್ಪಲು ದಸರಾ ಬಹುಭಾಷಾ ಕವಿಗೋಷ್ಠಿ ಕವನ’ ಎಂದು ನಮೂದಿಸಬೇಕು) ಅಥವಾ ಎಸ್.ಎಂ ರಜನಿ -೯೪೮೩೮ ೨೬೧೨೦, ಚಂದನಾ ಮಂಜುನಾಥ್ - ೯೯೮೬೯೩೯೩೫೭, ಇ-ಮೇಲ್ goಟಿiಞoಠಿಠಿಚಿಟಜಚಿsಚಿಡಿಚಿ@gmಚಿiಟ.ಛಿom ಗೆ ಕಳುಹಿಸುವಂತೆ ತಿಳಿಸಿದೆ.

ಯಾವುದೇ ಭಾಷೆಯಲ್ಲಿ ಸ್ವರಚಿತ, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಿಯೂ ಪ್ರಕಟವಾಗದ ಕವನಗಳನ್ನು ಮಾತ್ರ ಕಳುಹಿಸಬೇಕು. ಕವನಗಳು ಗರಿಷ್ಠ ೧೬ ಸಾಲುಗಳನ್ನು ಮೀರಬಾರದು. ಯಾವುದೇ ಭಾಷೆಯ ಒಂದು ಕವನವನ್ನು ಮಾತ್ರ ಆಯ್ಕೆಗೆ ಕಳುಹಿಸಬೇಕು. ಎರಡೆರಡು ಭಾಷೆಗಳಲ್ಲಿ ಒಬ್ಬರೆ ಕವನಗಳನ್ನು ಕಳುಹಿಸಿದಲ್ಲಿ ಅವರ ಎಲ್ಲಾ ಕವನಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೮ ರಂದು ಯುವ ದಸರಾ

ತಾ. ೨೮ ರಂದು ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ೧೫ ವರ್ಷದೊಳಗಿನವರಿಗೆ ಜಿಲ್ಲಾ ಮಟ್ಟದ ಸೈಕಲ್ ರೇಸ್, ರೆಡ್‌ಕ್ರಾಸ್ ಸಹಯೋಗದೊಂದಿಗೆ ರಕ್ತದಾನ ಶಿಬಿರ, ಬೈಕ್ ಸ್ಟಂಟ್ ಪ್ರದರ್ಶನ, ಸಂಜೆ ೬ ಗಂಟೆಯಿAದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದ್ದು, ಪ್ರಥಮ ವಿಜೇತರಿಗೆ ರೂ. ೨೫ ಸಾವಿರ, ದ್ವಿತೀಯ ೧೫ ಸಾವಿರ, ತೃತೀಯ ೧೦ ಸಾವಿರ ಬಹುಮಾನ ನೀಡಲಾಗುವುದು. ನೃತ್ಯ ಸ್ಪರ್ಧೆಗೆ ತಾ. ೨೫ ರ ಸಂಜೆ ೪ ಗಂಟೆಯ ಒಳಗಡೆ ನೋಂದಣಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿ ಹಾಗೂ ನೋಂದಾವಣಿಗಾಗಿ ಅಂಕಿತ್ ಪೊನ್ನಪ್ಪ, ಅಧ್ಯಕ್ಷರು : ೮೦೮೮೯೭೮೮೦೮; ಬೆವನ್, ಉಪಾಧ್ಯಕ್ಷ : ೭೮೯೯೨೮೮೪೭೧ ಅವರನ್ನು ಸಂಪರ್ಕಿಸಬಹುದಾಗಿದೆ.