ಸೋಮವಾರಪೇಟೆ, ಸೆ. ೧೨ : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಅರ್ಥಿಕ ವರ್ಷದಲ್ಲಿ ರೂ. ೪೫೩ ಕೋಟಿ ವ್ಯವಹಾರ ಮಾಡಿದ್ದು, ೧.೨೩ ಕೋಟಿ ಲಾಭ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಅರೆಯೂರು ಜಿ.ಬಿ. ಸೋಮಯ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ೫೪೩೮ ಸದಸ್ಯರಿದ್ದು, ೮೯.೬೨ ಕೋಟಿ ದುಡಿಯುವ ಬಂಡವಾಳವಿದೆ. ಆರ್ಥಿಕ ವರ್ಷದಲ್ಲಿ ೬೯.೮೭ ಕೋಟಿ ಸಾಲ ವಿತರಿಸಲಾಗಿದೆ. ಒಟ್ಟು ಠೇವಣಾತಿ ೪೬೭೯.೪೧ ಲಕ್ಷ ಇದ್ದು, ೩೧.೦೩.೨೦೨೫ರ ಅಂತ್ಯಕ್ಕೆ ೫೬೩೩.೦೩ ಲಕ್ಷ ಠೇವಣಿ ಸಂಗ್ರಹವಾಗಿದೆ. ೯೫೩.೬೨ ಲಕ್ಷ ಅಧಿಕ ಸಂಗ್ರಹಾತಿ ಮಾಡಲಾಗಿದೆ ಎಂದರು.
ಸAಘದಲ್ಲಿ ರೂ. ೨೫ ಸಾವಿರ ಹಾಗೂ ೧೦ ಸಾವಿರಗಳ ಮರಣ ನಿಧಿ ಯೋಜನೆ ಜಾರಿಯಲ್ಲಿದೆ. ೨೦೨೪-೨೫ನೇ ಸಾಲಿನಲ್ಲಿ ನಿಧನರಾದ ೪೭ ಮಂದಿ ಸದಸ್ಯರ ಕುಟುಂಬದ ವಾರಸುದಾರರಿಗೆ ರೂ. .೮೮ ಲಕ್ಷ ಮರಣ ನಿಧಿ ನೀಡಲಾಗಿದೆ ಎಂದು ತಿಳಿಸಿದರು.
ಸಂಘದಲ್ಲಿ ಜಾಮೀನು ಸಾಲದ ವಿಮಾ ಯೋಜನೆ ಜಾರಿಯಲ್ಲಿದ್ದು, ವರದಿ ಸಾಲಿನಲ್ಲಿ ಪೌತರಾದ ೧೫ ಸದಸ್ಯರುಗಳ ಜಾಮೀನು ಸಾಲದ ಅಸಲು ಮತ್ತು ಬಡ್ಡಿ ರೂ. ೧೧,೧೭,೨೮೯ನ್ನು ಸಂಘದಿAದ ಭರಿಸಿ ಚುಕ್ತಾ ಮಾಡಲಾಗಿದೆ ಎಂದರು.
ಇದರೊAದಿಗೆ ಪಿಗ್ಮಿ ಓವರ್ಡ್ರಾಫ್ಟ್ ಸಾಲದ ವಿಮಾ ಯೋಜನೆ ಜಾರಿಯಲ್ಲಿದೆ. ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗುತ್ತಿದೆ. ಸಂಘದ ಒಟ್ಟಾರೆ ಸಾಲ ಮರುಪಾವತಿ ೯೮.೫೭ರಷ್ಟಿದೆ. ಕೆಸಿಸಿ ಸಾಲದ ಎನ್.ಸಿ.ಎಲ್. ಮಿತಿಯನ್ನು ೧ ಎಕರೆ ಕಾಫಿ, ಕರಿಮೆಣಸಿಗೆ ೧,೦೨,೦೦೦ ಹಾಗೂ ಭತ್ತಕ್ಕೆ ರೂ. ೩೫,೦೦೦, ಜೋಳಕ್ಕೆ ೨೫,೦೦೦ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.
ಒಬ್ಬ ಸದಸ್ಯರ ಸಾಲದ ಮಿತಿಯನ್ನು ರೂ. ೬೦ಲಕ್ಷಕ್ಕೆ ನಿಗದಿಗೊಳಿಸಲಾಗಿದೆ. ಯಶಸ್ವಿನಿ ರೈತ ವಿಮಾ ಯೋಜನೆಯಡಿ ೪೯೮ ಕುಟುಂಬದ ೧೫೭೨ ಸದಸ್ಯರು ನೋಂದಾವಣೆ ಮಾಡಿದ್ದು, ೨,೩೩,೨೫೦ ರೂ.ಗಳನ್ನು ವಿಮಾ ಯೋಜನೆಗೆ ಜಮೆ ಮಾಡಲಾಗಿದೆ ಎಂದು ಸೋಮಯ್ಯ ಮಾಹಿತಿ ನೀಡಿದರು.
ತಾ. ೧೪ರಂದು ವಾರ್ಷಿಕ ಸಭೆ: ಸಂಘದ ವಾರ್ಷಿಕ ಮಹಾಸಭೆ ತಾ. ೧೪ರಂದು ಪೂರ್ವಾಹ್ನ ೧೦.೩೦ಕ್ಕೆ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ. ೨೦೨೪-೨೫ನೇ ಸಾಲಿನಲ್ಲಿ ಏಳನೇ ತರಗತಿ, ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಹಾಗೂ ಸಂಘದ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.
ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ಸೋಮವಾರಪೇಟೆ ತಾಲೂಕಿನ ವಸತಿ ರಹಿತ ಸರ್ಕಾರದ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಗುವುದು ಎಂದು ಸೋಮಯ್ಯ ತಿಳಿಸಿದರು.