ಮದೆನಾಡು, ಸೆ. ೧೭ : ಕೇರಳದ ಪಾಲಕ್ಕಾಡ್‌ನಲ್ಲಿ ಕಳವು ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು, ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಕಣ್ತಪ್ಪಿಸಿ ಪರಾರಿಯಾದ ಘಟನೆ ನಡೆದಿದೆ.

ಆರೋಪಿಗಳ ವಾಹನವನ್ನು ಟ್ರಾö್ಯಪ್ ಮಾಡಿ ಆರೋಪಿಗಳು ತಮ್ಮ ವಾಹನದ ಮೂಲಕ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಪ್ರಯಾಣಿಸುವ ಮಾಹಿತಿ ತಿಳಿದ ಕೇರಳ ಪೊಲೀಸರು ಅವರನ್ನು ಹಿಡಿಯುವುದಕ್ಕಾಗಿ ಕಲ್ಲುಗುಂಡಿ ಹೊರ ಠಾಣೆ ಬಳಿ ಕಾದು ಕುಳಿತಿದ್ದರು.

ಪೊಲೀಸರು ಇರುವ ವಿಷಯ ತಿಳಿದ ಆರೋಪಿಗಳು ಕಲ್ಲುಗುಂಡಿ ಪೆಟ್ರೋಲ್ ಪಂಪ್ ೭ನೇ ಪುಟ ಮೊದಲ ಪುಟದಿಂದ) ಬಳಿಯಿಂದ ತಪ್ಪಿಸಿಕೊಂಡು ಮಡಿಕೇರಿ ಕಡೆಗೆ ವೇಗವಾಗಿ ಹೋಗಿದ್ದು ಈ ಮಾಹಿತಿ ತಿಳಿದ ಸಾರ್ವಜನಿಕರು ದೇವರಕೊಲ್ಲಿ ಬಳಿ ಸೇತುವೆಯಲ್ಲಿ ಸೇರಿದ್ದರು. ಇದನ್ನು ಕೂಡ ಅರಿತ ಆರೋಪಿಗಳು ದೇವರಕೊಲ್ಲಿ ಬಳಿ ಕಾರನ್ನು ಬಿಟ್ಟು ಕಾಡಿನ ರಸ್ತೆಯಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಓರ್ವ ಯುವಕ ಹಾಗೂ ಓರ್ವ ಯುವತಿ ಆರೋಪಿಗಳಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಕೇರಳ ಪೊಲೀಸರು ದೇವರಕೊಲ್ಲಿಯಲ್ಲಿಯೇ ಬೀಡುಬಿಟ್ಟಿದ್ದಾರೆ.