ಸುಂಟಿಕೊಪ್ಪ, ಸೆ. ೧೮: ಕೂಡಿಗೆಯ ಏಂಜಲ್ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಂಟಿಕೊಪ್ಪದ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ವಯೋಮಿತಿ ೧೪ರ ೬೦ ಕೆ.ಜಿ. ಒಳಗಿನ ವಿಭಾಗದಲ್ಲಿ ಸ್ವಸ್ತಿಕ್ ಪ್ರಥಮ ಸ್ಥಾನ ಹಾಗೂ ೬೦ ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ಡಿ.ಎಂ. ಮನೀಶ್ ಪ್ರಥಮ ಸ್ಥಾನ ಹಾಗೂ ೧೭ರ ವಯೋಮಿತಿ ಬಾಲಕರ ೬೨ ಕೆ.ಜಿ.ಯೊಳಗಿನ ವಿಭಾಗದಲ್ಲಿ ಎಂ.ಎಸ್. ದಿಗಂತ್ ಈ ಸಾಧನೆ ಮಾಡಿದ್ದಾರೆ.

ಬಾಲಕಿಯರ ವಿಭಾಗದ ೬೨ ಕೆ.ಜಿ.ಯೊಳಗಿನ ವಿಭಾಗದಲ್ಲಿ ಸಂತ ಮೇರಿ ಶಾಲೆಯ ಆರ್. ಜೀವಿಕ ಪ್ರಥಮ ೪೮ ಕೆ.ಜಿ. ವಿಭಾಗದಲ್ಲಿ ಯಾನ ಚಂಗಪ್ಪ ಪ್ರಥಮ, ೪೪ ಕೆ.ಜಿ. ಯೊಳಗಿನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಅಮೂಲ್ಯ ೫೨ ಕೆ.ಜಿ. ಯೊಳಗಿನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಾಲೇಜು ವಿಭಾಗದ ೧೯ರ ವಯೋಮಿತಿಯ ಕರಾಟೆ ಸ್ಪರ್ಧೆಯಲ್ಲಿ ಕುಶಾಲನಗರ ವಿವೇಕಾನಂದ ಕಾಲೇಜಿನ ಹರಿಪ್ರಿಯಾ ೪೮ ಕೆ.ಜಿ. ಯೊಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಎಲ್ಲ ಸ್ಪರ್ಧಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಕರಾಟೆ ತರಬೇತುದಾರ ಬಿ.ಎಂ. ಮಣಿ ಮುಖೇಶ್ ತಿಳಿಸಿದ್ದಾರೆ.