*ಗೋಣಿಕೊಪ್ಪ, ಸೆ. ೧೯: ಜೈ ಭೀಮ್ ಯುವಕ ಸಂಘ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ವಿಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಗೌರವಾರ್ಥ ಧ್ವಜಸ್ತಂಭ ನಿರ್ಮಿಸಲು ಗ್ರಾಮ ಪಂಚಾಯಿತಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದ ಬಲಭಾಗದಲ್ಲಿ ಧ್ವಜಸ್ತಂಭ ಹಾಕುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನ ಮಂಥನ, ಗೌರವಾರ್ಥ ಕಾರ್ಯಕ್ರಮಗಳು ಈ ಧ್ವಜಸ್ತಂಭದಡಿಯಲ್ಲಿ ನಡೆಸಲು ಸಮಿತಿ ನಿರ್ಧರಿಸಲಾಗಿದೆ.

ಈ ಉದ್ದೇಶದೊಂದಿಗೆ ಪಂಚಾಯಿತಿ ಧ್ವಜಸ್ತಂಭ ಅಳವಡಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಯುವಕ ಸಂಘದ ಸಂಚಾಲಕ ಕುಮಾರಪ್ಪ ಹಾಗೂ ಮಧು ತಿಳಿಸಿದ್ದಾರೆ.