ಚೆಯ್ಯಂಡಾಣೆ, ಸೆ. ೧೯: ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೫-೨೬ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಹಾಗೂ ಜಮಾಬಂದಿ ಸಭೆ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ವಿರೂಪಾಕ್ಷ ವಹಿಸಿದ್ದರು.ಅನುಪಾಲನ ವರದಿಯನ್ನು ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕು ಸಂಯೋಜಕರಾದ ಸುಂದರೇಶ್ ಮಂಡಿಸಿದರು.
ತಾಲೂಕು ಲೆಕ್ಕ ಪರಿಶೋಧನೆಯ ನುಸೈಬ ಲೆಕ್ಕ ಪರಿಶೋಧನ ವರದಿಯನ್ನು ಮಂಡಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಆಕ್ಷೇಪಣೆ ಹಾಗೂ ಇತರ ಸಮಸ್ಯೆ ಇದ್ದರೆ ಸಭೆಯಲ್ಲಿ ತಿಳಿಸುವಂತೆ ಹೇಳಿದರು.
ನರಿಯಂದಡ ಸಂಜೀವಿನಿ ಒಕ್ಕೂಟದ ಪಲಾನುಭವಿಗಳಿಗೆ ೨ ಸಂಘಗಳಿಗೆ ೩ ಲಕ್ಷ ರೂಪಾಯಿಯ ಚೆಕ್ ಅನ್ನು ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷರಾದ ವಿನೋದ್ ನಾಣಯ್ಯ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಸಂಜೀವಿನಿ ಒಕ್ಕೂಟದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಕರವಸೂಲಿಗಾರ ದಿನೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು.