ಪಾಲಿಬೆಟ್ಟ, ಸೆ. ೧೯ : ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ೧೦೪ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ೨೦೨೪-೨೫ನೇ ಸಾಲಿನಲ್ಲಿ ರೂ. ೧೬೬.೮೭ ಕೋಟಿ ವಾರ್ಷಿಕ ವಹಿವಾಟು ನಡೆಸಿ ರೂ. ೫೨.೨೩ ಲಕ್ಷ ಲಾಭ ಗಳಿಸಿರುವುದಾಗಿ ಸಂಘದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ತಿಳಿಸಿದ್ದಾರೆ.
ಸಹಕಾರ ಸಂಘದ ಕಚೇರಿಯಲ್ಲಿ ಇಂದು ನಡೆದ ನಿರ್ದೇಶಕರ ಸಭೆಯಲ್ಲಿ ಮಾಹಿತಿ ನೀಡಿದ ಅವರು ೧೯೨೧ರಲ್ಲಿ ಸಂಘ ಸ್ಥಾಪನೆಯಾಗಿದ್ದು ೧೦೪ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಹಕಾರ ಸಂಘವು
೩೧-೦೩-೨೦೨೫ರ ಅಂತ್ಯಕ್ಕೆ ೧೦೫೨ ಸದಸ್ಯರನ್ನು ಹೊಂದಿದ್ದು ರೂ.೧೭೦.೫೭ ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. ಸಂಘದಲ್ಲಿ ಕ್ಷೇಮನಿಧಿ ರೂ. ೩೦೪.೮೬ ಲಕ್ಷ ಇದ್ದು, ವರದಿ ಸಾಲಿನಲ್ಲಿ ಸಂಘದ ಸದಸ್ಯರಿಗೆ ಶೇ. ೧೭ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ.
ಸಂಘದ ಸದಸ್ಯರಿಗೆ ಹಾಗೂ ವ್ಯಾಪಾರಸ್ಥರಿಗೆ ಪಿಗ್ಮಿ ಸಾಲ, ರೈತರಿಗೆ ಕೃಷಿ ಸಾಲ, ಕೃಷಿಯೇತರ ಸಾಲ ಇನ್ನಿತರ ಸಾಲಗಳನ್ನು ನೀಡಲಾಗುವುದು ಅಲ್ಲದೆ ಸಂಘವು ಪಾಲಿಬೆಟ್ಟದಲ್ಲಿ ಎರಡು ಮಾರಾಟ ಮಳಿಗೆಯನ್ನು ಹೊಂದಿದ್ದು ಇದರ ಮುಖಾಂತರ ಗ್ರಾಹಕರಿಗೆ ಪೈಂಟ್, ಹತ್ಯಾರು, ಕ್ರಿಮಿನಾಶಕ, ಗೊಬ್ಬರ, ಹೆಂಚು, ಅಡುಗೆ ಅನಿಲ ಮಾರಾಟ ಮಾಡುತ್ತಿದ್ದು, ಸಂಘದಲ್ಲಿ ಇ-ಸ್ಟ್ಯಾಂಪಿAಗ್, ಆಧುನಿಕ ಪೈಂಟ್ ಮಿಕ್ಸಿಂಗ್ ಯಂತ್ರದ ವ್ಯವಸ್ಥೆ ಕೂಡ ಇರುತ್ತದೆ ಎಂದರು.
ಸAಘದಲ್ಲಿ ಗೋದಾಮು ವ್ಯವಸ್ಥೆಯಿದ್ದು ಸದಸ್ಯರಿಂದ ಕಾಫಿ, ಕರಿಮೆಣಸು ಅಡವಿಟ್ಟು ರೂ. ೪೬೧.೫೯ ಲಕ್ಷ ಅಡಮಾನ ಸಾಲ ವಿತರಿಸಲಾಗಿದೆ. ಸಂಘದಲ್ಲಿ ತೊಡಗಿಸಿರುವ ನಿರಕು ಠೇವಣಿಗೂ ಹೆಚ್ಚಿನ ಬಗ್ಗೆ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಶೇ. ೦.೫೦ ಹಾಗೂ ಸೇನೆಯ ನಿವೃತ್ತ ಯೋಧ ಸದಸ್ಯರಿಗೆ ೦.೨೫ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ .
ಸಂಘದ ಮತ್ತೊಂದು ಶಾಖೆಯು ಚೆನ್ನಯ್ಯನಕೋಟೆಯಲ್ಲಿದ್ದು ಮಾರಾಟ ಮಳಿಗೆ ಹಾಗೂ ಬ್ಯಾಂಕ್ ವ್ಯವಹಾರವನ್ನು ಹೊಂದಿರುತ್ತದೆ. ವಾರ್ಷಿಕ ಮಹಾಸಭೆಯು ದಿನಾಂಕ ೨೦.೦೯.೨೦೨೫ನೇ ಶನಿವಾರ ನಡೆಯಲಿದ್ದು, ಸಂಘದ ಸದಸ್ಯರು ಸಂಘದಲ್ಲಿ ಕನಿಷ್ಠ ವ್ಯವಹಾರಗಳನ್ನು ಮಾಡುವ ಮೂಲಕ ಮಹಾಸಭೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಪ್ರತಿ ವರ್ಷ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನಗಳನ್ನು ನೀಡುತ್ತಾ ಬಂದಿರುತ್ತೇವೆ ಎಂದರು. ಸಂಘದ ಮಹಾಸಭೆ ತಾ. ೨೦ ರಂದು (ಇಂದು) ಜರುಗಲಿದೆ.
ಕುಟ್ಟಂಡ ಅಜಿತ್ ಕರುಂಬಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ವಿ.ವಿ. ಡಾಲು, ನಿರ್ದೇಶಕರುಗಳಾದ ಕೊಲ್ಲಿರ ಧರ್ಮಜ, ಶ್ಯಾಂಚAದ್ರ, ಅನಿತಾ ಸುರೇಶ್, ಶೋಭ ಕುಟ್ಟಪ್ಪ, ಎಂ.ಟಿ. ಗ್ರೇಸಿ, ಎಂ.ಬಿ. ಪವಿತ್ರ, ಹೆಚ್.ಕೆ. ದಿನೇಶ್, ಸಿ.ಎಲ್. ಸೋಮೇಶ್, ಮನೋಜ್ ಪೊನ್ನಣ್ಣ, ಟಿ.ಜಿ. ವಿಜೇಶ್, ಎಸ್ .ಸಿ. ಸೋಮಣ್ಣ ಹಾಗೂ ಕಾರ್ಯನಿರ್ವಹಣಾಧಿಕಾರಿ ಸಿ.ಎ. ಸುಮಿತ ಉಪಸ್ಥಿತರಿದ್ದರು.