ಕೊಡ್ಲಿಪೇಟೆ, ಸೆ. ೧೯: ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ಸರ್ಕಾರಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಸ್ಸಾಂ ಕಾರ್ಮಿಕರಿಗೆ ಶೆಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ತಾಲೂಕು ತಹಶೀಲ್ದಾರರಿಗೆ ದೂರು ನೀಡಿದ್ದಾರೆ.

ದೊಡ್ಡಕೊಡ್ಲಿ ಗ್ರಾಮದ ಸರ್ವೆ ನಂ. ೧೧/೧೫ರ ಪೈಸಾರಿ ಜಾಗದಲ್ಲಿ ಸ್ಥಳೀಯ ನಿವಾಸಿಯೋರ್ವರು ಅಕ್ರಮವಾಗಿ ಶೆಡ್ ರೀತಿಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದನ್ನು ಅಸ್ಸಾಂನಿAದ ಆಗಮಿಸಿರುವ ವಲಸೆ ಕಾರ್ಮಿಕರಿಗೆ ಬಾಡಿಗೆ ನೀಡಲು ಮುಂದಾಗಿದ್ದಾರೆ.

ಈ ಕಟ್ಟಡದಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ಅಡಚಣೆಯುಂಟಾಗಿದೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದೂ ಅಲ್ಲದೇ, ಅದರಲ್ಲಿ ಶೆಡ್ ನಿರ್ಮಿಸಿ ಅಸ್ಸಾಂ ಕಾರ್ಮಿಕರಿಗೆ ಬಾಡಿಗೆ ನೀಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಸಮಸ್ಯೆಯುಂಟಾಗದAತೆ ಈಗಲೇ ಕ್ರಮ ವಹಿಸಬೇಕೆಂದು ತಾಲೂಕು ತಹಶೀಲ್ದಾರರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.

ನುಸುಳುಕೋರರ ವಿರುದ್ಧ ಕ್ರಮಕ್ಕೆ ಆಗ್ರಹ

ಇದೇ ವಿಚಾರವಾಗಿ ತಾಲೂಕು ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಪ್ರತ್ಯೇಕ ಮನವಿಯನ್ನು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರಿಗೆ ಸಲ್ಲಿಸಿದ್ದು, ಈಗಾಗಲೇ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳದ ನಿವಾಸಿಗಳೆಂದು ತಾಲೂಕಿನ ಹಲವು ಎಸ್ಟೇಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಮೂಲದ ಬಗ್ಗೆ ಸಂಶಯವಿದ್ದು, ಇವರುಗಳು ಬಾಂಗ್ಲಾದಿAದ ಬಂದಿರುವ ಅಕ್ರಮ ನುಸುಳುಕೋರರೆಂಬ ಅನುಮಾನವಿದೆ. ಈ ಬಗ್ಗೆ ತಾಲೂಕು ಆಡಳಿತ ಗಮನ ಹರಿಸಬೇಕೆಂದು ಮನವಿ ಮಾಡಲಾಗಿದೆ.

ಅಕ್ರಮ ವಲಸಿಗರಿಂದ ಈಗಾಗಲೇ ಜಿಲ್ಲೆಯಲ್ಲಿ ಕಾನೂನು ಬಾಹಿರ ಕೃತ್ಯಗಳು ವರದಿಯಾಗುತ್ತಿವೆ. ಕಳ್ಳತನ, ದರೋಡೆ, ಹಲ್ಲೆ, ಹತ್ಯೆಯಂತಹ ಘಟನೆಗಳು ನಡೆಯುತ್ತಿವೆ. ಇಂತಹ ಅಕ್ರಮ ವಲಸಿಗರಿಗೆ ಸ್ಥಳೀಯರೇ ಬಾಡಿಗೆ ಮನೆಗಳನ್ನು ನೀಡುತ್ತಿರುವುದು ದುರಂತ. ಮುಂದೆ ಇಂತಹವರಿAದ ಸ್ಥಳೀಯ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾದರೆ, ಬಾಡಿಗೆದಾರರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ವಲಸೆ ಕಾರ್ಮಿಕರ ಪೂರ್ವಾಪರ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕೆಂದು ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಮನವಿ ಮಾಡಲಾಯಿತು.

ಈ ಸಂದರ್ಭ ಹಿಂದೂ ಸುರಕ್ಷಾ ಸಮಿತಿಯ ಪದಾಧಿಕಾರಿಗಳಾದ ಪಿ. ಮಧು, ಎಂ.ಬಿ. ಉಮೇಶ್, ನಾಗೇಶ್, ರಕ್ಷಿತ್, ರಮೇಶ್ ಸೇರಿದಂತೆ