ಸುಂಟಿಕೊಪ್ಪ, ಸೆ. ೨೦: ನಾಕೂರು-ಶಿರಂಗಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಶಿವಮ್ಮ ಅವರು ಸೇವೆ ಸಲ್ಲಿಸುತ್ತಿದ್ದು ವಯೋನಿವೃತ್ತಿಗೊಂಡಿರುವ ಇವರನ್ನು ನಾಕೂರು ಗ್ರಾಮದ ಲಕ್ಷಿö್ಮ ಮಹಿಳಾ ಒಕ್ಕಲಿಗ ಗೌಡ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಳೆದ ೧೬ ವರ್ಷಗಳ ಕಾಲ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ಬಿ ಎಸ್ ಶಿವಮ್ಮ ಅವರನ್ನು ಸಂಘದ ಅಧ್ಯಕ್ಷೆ ಜಾಜಿ ಪುಟ್ಟರಾಜು, ಕಾರ್ಯದರ್ಶಿ ಶಿಲ್ಪ ಗಿರೀಶ್ ಹಾಗೂ ಸಂಘ ಪದಾಧಿಕಾರಿಗಳು ಸೇವೆಯನ್ನು ಪರಿಗಣಿಸಿ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಿದರು.