ಮಡಿಕೇರಿ, ಸೆ. ೨೦: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ೨೦೨೫-೨೬ನೇ ಸಾಲಿಗೆ ಜಿಲ್ಲೆಯ ವಿವಿಧ ಸಂಘ-ಸAಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ (ಗಣಪತಿ ಉತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಇತರೇ ಕಾರ್ಯಕ್ರಮಗಳನ್ನು ಹೊರತುಪಡಿಸಿ) ವೇದಿಕೆ ಹಾಗೂ ಮೆರವಣಿಗೆಗೆ ಸಂಬAಧಿಸಿದAತೆ ಕಲಾ ತಂಡಗಳನ್ನು ನಿಯೋಜಿಸಲು ಅವಕಾಶವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದೆ.
ಕಾರ್ಯಕ್ರಮಗಳು ರೂಪಿಸಿಕೊಂಡ ಸಂಘ-ಸAಸ್ಥೆಗಳು ಇಲಾಖೆ ವತಿಯಿಂದ ವೇದಿಕೆ ಹಾಗೂ ಮೆರವಣಿಗೆಗೆ ಕಲಾತಂಡಗಳನ್ನು ಪ್ರಾಯೋಜಿಸಲು ತಮ್ಮ ಪೂರ್ವ ವಿವರಗಳೊಂದಿಗೆ ಸಕಾಲದ ಸೇವಾಸಿಂಧುವಿನಡಿ ಕಾರ್ಯಕ್ರಮ ನಡೆಯುವ ೧೫ ದಿನಗಳ ಮುಂಚಿತವಾಗಿ ಮನವಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ಇಲ್ಲಿ ಕಚೇರಿ ವೇಳೆಯಲ್ಲಿ ದೂ.ಸಂ. ೦೮೨೭೨-೨೨೮೪೯೦ ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.