ಮಡಿಕೇರಿ, ಸೆ. ೨೦: ಯಾವುದೇ ಸಂಘ-ಸAಸ್ಥೆಗಳಲ್ಲಿ ಕಾರಣ ಇಲ್ಲದೆ ಬದಲಾವಣೆಯ ಕೂಗು ಬರುವುದಿಲ್ಲ ಎಂಬದು ವಾಸ್ತವ ಸತ್ಯ ಎಂಬದಾಗಿ ಕೊಡವ ಹಾಕಿ ಅಕಾಡೆಮಿ ಚುನಾವಣೆ ವಿಚಾರಕ್ಕೆ ಸಂಬAಧಿಸಿದAತೆ ಸ್ಪರ್ಧೆಯಲ್ಲಿರುವ ಮೇಕೇರಿರ ರವಿ ಪೆಮ್ಮಯ್ಯ ತಂಡದ ಪ್ರಮುಖರು ಹೇಳಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರವಿ ಪೆಮ್ಮಯ್ಯ ಹಾಗೂ ಇತರರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಬದಲಾವಣೆ ಕೇಳುವುದರ ಅರ್ಥ ಯಾವುದೇ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಎಂಬದಾಗಿ ಅಲ್ಲ ಬದಲಾಗಿ ಸಮುದಾಯದ / ಸಂಸ್ಥೆಗಳ ಪಾವಿತ್ರತೆ ಹಾಗೂ ಏಳಿಗೆಗೆ ಇರುವ ಸದವಕಾಶ ಎಂಬುದು ತಮ್ಮ ನಿಲುವಾಗಿದೆ ಎಂದು ಅವರು ಹೇಳಿದರು.
ಬೈಲಾ ನಿಯಮದ ಅನುಸಾರ ಅಕಾಡೆಮಿಗೆ ಆಡಳಿತ ಮಂಡಳಿ ಚುನಾವಣೆ ಘೋಷಣೆಯಾಗಿದೆ. ಸದರಿ ಚುನಾವಣೆಗೆ ಪಾಂಡAಡ ಕುಟ್ಟಪ್ಪನವರ ಮಗನಾದ ಬೋಪಣ್ಣ ಹಾಗೂ ಮೇಕೇರಿರ ರವಿ ಪೆಮ್ಮಯ್ಯ ಅವರ ಮುಂದಾಳತ್ವದಲ್ಲಿ ಎರಡು ತಂಡಗಳು ಹಾಗೂ ಇತರೆ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕೊಡಗಿನ ಅನೇಕ ಕೊಡವ ಮುಖಂಡರುಗಳು ಮತ್ತು ಕ್ರೀಡಾಪ್ರೇಮಿಗಳು ಚುನಾವಣೆ ಇಲ್ಲದೆ ಒಮ್ಮತದಿಂದ ಒಂದು ತಂಡವನ್ನು ರಚಿಸಿ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವಂತೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮತ್ತು ವೈಯಕ್ತಿಕವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮೇರೆಗೆ ಮೇಕೇರಿರ ರವಿ ಪೆಮ್ಮಯ್ಯ ಮತ್ತು ಸಂಗಡಿಗರು, ಅಖಿಲ ಕೊಡವ ಸಮಾಜದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಸಮ್ಮುಖದಲ್ಲಿ ಸಭೆ ನಡೆಸಿ ಹೊಂದಾಣಿಕೆಗೆ ಒಪ್ಪಿಗೆ ಸೂಚಿಸಿದ್ದರು. ಬಳಿಕ ಬೋಪಣ್ಣನವರ ತಂಡದವನು ಸದರಿ ಸಮಾಜದ ಗಣ್ಯರು ಕರೆದು ಅವರ ಅಭಿಪ್ರಾಯ ಪಡೆದಲ್ಲಿ ಹಾಲಿ ಇರುವ ಬೋಪಣ್ಣ ಅವರ ತಂಡದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಮಾಡದೆ ಪೆಮ್ಮಯ್ಯ ಅವರ ತಂಡಕ್ಕೆ ಕೇವಲ ಎರಡು ಸ್ಥಾನಗಳನ್ನು ನೀಡುವ ಅವರ ನಿಲುವನ್ನು ಪೆಮ್ಮಯ್ಯನವರ ತಂಡವು ನಿರಾಕರಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿದಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಸ್ಪರ್ಧೆಯಲ್ಲಿರುವ ಬುಟ್ಟಿಯಂಡ ಚಂಗಪ್ಪ, ಮಾದಂಡ ಪೆಮ್ಮಯ್ಯ, ಕಲ್ಮಾಡಂಡ ತರುಣ್, ಮಚ್ಚಾರಂಡ ಪ್ರವೀಣ್ ಹಾಜರಿದ್ದರು.