ಶನಿವಾರಸಂತೆ, ಸೆ. ೨೦: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಸಮೀಪದ ನಂದಿಗುAದ, ಹಿತ್ತಲಕೇರಿ, ಮಾದೇಗೋಡು ಹಾಗೂ ಹಾರೆಹೊಸೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ವಿವಿಧ ಆಟಗಳ ಸಾಮಗ್ರಿ, ಚಾಪೆ ಹಾಗೂ ಬೆಡ್ ಶೀಟ್‌ಗಳನ್ನು ವಿತರಿಸಲಾಯಿತು.

ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಯಶವಂತ್ ಹಾಗೂ ಕಾರ್ಯದರ್ಶಿ ಎಚ್.ಪಿ. ಚಂದನ್ ೪ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ಸಾಮಗ್ರಿಗಳನ್ನು ವಿತರಿಸಿ ಸಂಭ್ರಮಿಸಿದರು. ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರಾದ ಗಾಯತ್ರಿ, ವರಮಹಾಲಕ್ಷಿö್ಮ ಹಾಗೂ ಪ್ರತಿಮಾ, ಇತರರು ಹಾಜರಿದ್ದರು.