ಮುಳ್ಳೂರು , ಸೆ. ೨೦ :ದಲಿತರ ಭೂ ಸಮಸ್ಯೆಗಳನ್ನು ಬಗೆಹರಿಸದ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ತಾ. ೨೨ ರಂದು ಕೊಡ್ಲಿಪೇಟೆ ನಾಡ ಕಛೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದೆಂದು ಡಿಎಸ್‌ಎಸ್ ಜಿಲ್ಲಾ ಸಂಯೋಜಕ ಎಂ.ಎನ್.ರಾಜಪ್ಪ ಹೇಳಿದರು.

ಶನಿವಾರಸಂತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು-ಕೊಡ್ಲಿಪೇಟೆ ಹೋಬಳಿಯಲ್ಲಿ ದಲಿತರ ಭೂಮಿಗೆ ಸಂಬAಧಪಟ್ಟAತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಹೆಬ್ಬುಲ್ಸೆ, ತಳಗೂರು, ಕೂಡ್ಲೂರು ಗ್ರಾಮಗಳಲ್ಲಿ ಭೂ ಸಮಸ್ಯೆ ಮತ್ತು ಶನಿವಾರಸಂತೆ ಹೋಬಳಿಯ ಹೆಮ್ಮನೆ, ಚನ್ನಾಪುರ, ಬೀಕನಹಳ್ಳಿ ಗ್ರಾಮಗಳಲ್ಲಿ ಭೂ ಸಮಸ್ಯೆ ಇದ್ದು ಯಾವ ಸಮಸ್ಯೆಯನ್ನು ಇದುವರೆಗೂ ಬಗೆಹರಿಸಿಲ್ಲ ಎಂದು ಆರೋಪಿಸಿದರು. ದಲಿತರ ಭೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷö್ಯತನ ತೋರಿರುವುದ್ದರಿಂದ ನೆನೆಗುದಿಗೆ ಬೀಳಲು ಕಾರಣವಾಗಿದೆ ಈ ನಿಟ್ಟಿನಲ್ಲಿ ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿಗಳ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಕೂಡಲೆ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು.

ಜಿಲ್ಲಾ ಸಂಘಟನಾ ಸಂಯೋಜಕ ಎನ್.ಆರ್.ದೇವರಾಜ್ ಮಾತನಾಡಿ-ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿಗಳಲ್ಲಿ ದಲಿತರ ಭೂ ಸಮಸ್ಯೆ ಸೇರದಂತೆ ದಲಿತರಿಗೆ ಅನ್ಯಾಯವಾಗುತ್ತಿದ್ದರೂ ಸಂಬAಧ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಸರಿಪಡಿಸದಿದ್ದಲ್ಲಿ ಸಂಘಟನೆಯು ಜಿಲ್ಲಾಯಾದ್ಯಂತ ಹೋಬಳಿ ಮತ್ತು ತಾಲೂಕುಗಳ ಕಚೇರಿ ಮುಂಭಾಗದಲ್ಲಿ ಇನ್ನು ಹೋರಾಟ ನಡೆಸಲಾಗುವುದೆಂದು ಎಂದ ಅವರು ತಾ. ೨೨ ರಂದು ಕೊಡ್ಲಿಪೇಟೆ ಕಂದಾಯ ಇಲಾಖೆಯ ಕಚೇರಿ ಮುಂಭಾಗದಲ್ಲಿ ಜಿಲ್ಲಾ ದಸಂಸ ಶಾಖೆ ವತಿಯಿಂದ ಪ್ರತಿಭಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ.ಇ. ಪೊನ್ನಪ್ಪ, ತಾಲೂಕು ಸಂಯೋಜಕ ಚಂದ್ರಶೇಖರ್, ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ್ ಮತ್ತು ಧರ್ಮರಾಜ್ ಹಾಜರಿದ್ದರು.

- ಭಾಸ್ಕರ್ ಮುಳ್ಳೂರು