ಶನಿವಾರಸಂತೆ, ಸೆ. ೨೩: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪-೨೫ನೇ ಸಾಲಿಗೆ ರೂ. ೧.೦೯,೦೪,೧೬೮.೮೫ ರಷ್ಟು ನಿವ್ವಳ ಲಾಭ ಗಳಿಸಿದ್ದು “ಎ’’ ಗ್ರೇಡ್ ಪಡೆದಿರುತ್ತದೆ ಹಾಗೂ ಲಾಭ ವಿಲೇವಾರಿ ಬಾಕಿ ಇರುತ್ತದೆ ಎಂದು ಸಂಘದ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಸಂತೋಷ ವ್ಯಕ್ತಪಡಿಸಿದರು.

ಕೊಡ್ಲಿಪೇಟೆಯ ಶ್ರೀಬಸವೇಶ್ವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ೧೦೪ ವರ್ಷಗಳನ್ನು ಪೂರೈಸಿದ್ದು ಪೂರ್ಣ ಪ್ರಮಾಣದ ೪,೨೪೫ ಸದಸ್ಯರನ್ನು ಹೊಂದಿರುತ್ತದೆ. ಪೂರ್ಣ ಪ್ರಮಾಣದ ಷೇರುಗಳಲ್ಲಿ ರೂ. ೪೪೧.೭೫ ಲಕ್ಷ ಪಾಲು ಹಣವಿರುತ್ತದೆ. ೨,೪೮೩ ಸದಸ್ಯರು ಮರಣ ನಿಧಿ ವಂತಿಕೆ ಹಣ ಪಾವತಿ ಮಾಡಿರುತ್ತಾರೆ. ಕೆ.ಡಿ.ಸಿ.ಸಿ. ಬ್ಯಾಂಕಿನಲ್ಲಿ ರೂ. ೨೨೦.೮೯ ಲಕ್ಷ ಕ್ಷೇಮನಿಧಿ ಹಾಗೂ ರೂ. ೧೦೧.೯೩ ಲಕ್ಷ ಇತರೆ ನಿಧಿಗಳು ಇರುತ್ತವೆ.೨೦೨೪-೨೫ನೇ ಸಾಲಿನವರೆಗೆ ರೂ. ೧೬ ಕೋಟಿ ೮೪ ಲಕ್ಷ ಠೇವಣಿ ಸಂಗ್ರಹಿಸಲಾಗಿದೆ ಎಂದರು.

ಸAಘದ ಸರ್ವತೋಮುಖ ಅಭಿವೃದ್ಧಿಗೆ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹಕಾರ ಇಲಖೆ ಅಧಿಕಾರಿಗಳು, ಕೆ.ಡಿ.ಸಿ.ಸಿ. ಆಡಳಿತ ಮಂಡಳಿ, ಸಂಘದ ಸಿಬ್ಬಂದಿ ವರ್ಗದವರ ಸಹಕಾರ ಹಾಗೂ ಪಿಗ್ಮಿ ಠೇವಣಿ ಸಂಗ್ರಹಕಾರರೇ ಕಾರಣಕರ್ತರು. ಸಹಕಾರಿ ಸದಸ್ಯರು ಸಕಾಲದಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸುವ ಮೂಲಕ ಸಂಘದ ಮತ್ತಷ್ಟು ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಕರೆ ನೀಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ವೈ. ಮಂಜುನಾಥ್ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು.

ಮಹಾಸಭೆಯಲ್ಲಿ ಸುದೀರ್ಘ ಚರ್ಚೆಗಳು ನಡೆದವು. ಸಹಕಾರಿ ಸದಸ್ಯರಾದ ಭಗವಾನ್ ಗೌಡ, ಕೆ.ಸಿ. ಪ್ರಸನ್ನ, ಸುದೀರ್, ಎಚ್.ಎಂ. ರಾಜಶೇಖರ್, ಎಸ್.ಕೆ. ಧರ್ಮಪ್ಪ ಮತ್ತಿತರರು ಡಿವಿಡೆಂಡ್ ಹೆಚ್ಚಿಸುವ ಬಗ್ಗೆ. ಯಶಸ್ವಿನಿ ಯೋಜನೆ, ಜಾಮೀನು ಸಾಲ-ವ್ಯಾಪಾರಭಿವೃದ್ಧಿ ಸಾಲ- ಗೊಬ್ಬರ ಸಾಲಗಳ ಬಡ್ಡಿ ಕಡಿಮೆ ಮಾಡುವ ಬಗ್ಗೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಎಚ್.ಜೆ. ಪ್ರವೀಣ್, ನಿರ್ದೇಶಕರಾದ ಬಿ.ಕೆ. ಯತೀಶ್, ಜೆ.ಕೆ. ತೇಜಕುಮಾರ್, ಕೆ.ಎಂ.ವಹಾಬ್, ಡಾ. ಸಿ.ಆರ್. ಉದಯಕುಮಾರ್, ಕೆ.ಆರ್. ಚಂದ್ರಶೇಖರ್, ಕೆ.ಡಿ. ನಾಗರಾಜ್, ಬಿ.ಕೆ. ರಂಜಿತ್, ಕೆ.ವಿ. ಮಲ್ಲೇಶ್, ಕೆ.ಎಂ. ಪುಷ್ಪಲತಾ, ಬಿ.ಎಸ್. ದೊಡ್ಡಯ್ಯ, ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ಎಚ್.ಎನ್. ರಘು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ವೈ.ಮಂಜುನಾಥ್ ಉಪಸ್ಥಿತರಿದ್ದರು. ಕಿರಿಯ ಸಹಾಯಕರಾದ ಬಿ.ಡಿ. ಅಮೃತ, ಯು.ಪಿ. ನಾಗೇಶ್, ಬಿ.ಕೆ. ಶಶಿಧರ್, ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು. ಎಚ್.ಕೆ. ಪ್ರವೀಣ್ ಸ್ವಾಗತಿಸಿ, ಕೆ.ಆರ್. ಚಂದ್ರಶೇಖರ್ ವಂದಿಸಿ, ಯು.ವೈ. ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.