ಸೋಮವಾರಪೇಟೆ, ಸೆ. ೨೩: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಯುವ ಮೋರ್ಚಾದಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ಪಟ್ಟಣದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು.

ಜಾಥಾದಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರು, ಪ್ರಧಾನಿಯಾಗಿ ಮೋದಿ ಅವರು ಕೈಗೊಂಡ ಸಾಧನೆಗಳು, ಅನುಷ್ಠಾನಗೊಳಿಸಿದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಕ್ಷದ ಕಾರ್ಯಕರ್ತರು ಕಾಲ್ನಡಿಗೆ ಜಾಥಾದಲ್ಲಿ ತೆರಳಿದರು. ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಪಕ್ಷದ ಪದಾಧಿಕಾರಿಗಳಾದ ಎಸ್.ಆರ್. ಸೋಮೇಶ್, ಬಿ.ಜೆ. ದೀಪಕ್, ಶ್ರೀನಿಧಿ ಲಿಂಗಪ್ಪ, ದರ್ಶನ್ ಜೋಯಪ್ಪ, ಬಿ.ಆರ್. ಮೃತ್ಯುಂಜಯ, ಕಿಬ್ಬೆಟ್ಟ ಮಧು, ಮಲ್ಲಾಜೀರ ಪ್ರವೀಣ್, ಶರತ್‌ಚಂದ್ರ, ಕವಿತಾ ವಿರೂಪಾಕ್ಷ, ಇಂದಿರಾ ಮೋಣಪ್ಪ, ಸುಮಾ ಸುದೀಪ್, ಹೆಚ್.ಎನ್. ತಂಗಮ್ಮ, ಜೀವನ್ ನೇಗಳ್ಳೆ, ಪ್ರೇಮ್‌ಸಾಗರ್, ದೊಡ್ಡಮಳ್ತೆ ರುದ್ರಪ್ಪ, ಭಾನುಪ್ರಕಾಶ್ ಸೇರಿದಂತೆ ಇತರರು ಇದ್ದರು.