ಮಡಿಕೇರಿ, ಸೆ. ೨೩: ಜಿಲ್ಲಾ ಸಹಕಾರ ಯೂನಿಯನ್ಗೆ ಚುನಾವಣೆ ನಡೆದು ನಿರ್ದೇಶಕರಾಗಿ ೧೫ ಮಂದಿ ಚುನಾಯಿತರಾಗಿದ್ದಾರೆ.
ಯೂನಿಯನ್ ಕಟ್ಟಡದಲ್ಲಿ ಪ್ರಕ್ರಿಯೆ ನಡೆಯಿತು. ಜಿಲ್ಲಾ ಮಟ್ಟದ ಕಾರ್ಯಕ್ಷೇತ್ರವುಳ್ಳ ಸಹಕಾರ ಸಂಘಗಳ ಕ್ಷೇತ್ರದಿಂದ ಪಳೆಯಂಡ ಯು. ದೇವಯ್ಯ ಹಾಗೂ ಎಚ್.ಕೆ. ಮಾದಪ್ಪ ಚುನಾಯಿತಗೊಂಡರು.
ಸಹಕಾರ ಮಹಿಳಾ ಸಮಾಜ ಮತ್ತು ಮಹಿಳಾ ಸಹಕಾರ ಸಂಘ, ಮಹಿಳಾ ವಿವಿದೊದ್ಧೇಶ ಸಹಕಾರ ಸಂಘಗಳ ಕ್ಷೇತ್ರದ ಮೀಸಲಿನಿಂದ ಎಂ.ಎA. ಶ್ಯಾಮಲಾ ಅವಿರೋಧವಾಗಿ ಆಯ್ಕೆಯಾದರು.
ಮಡಿಕೇರಿ ತಾಲೂಕು ಸಹಕಾರ ಕ್ಷೇತ್ರದಿಂದ ಎ.ಕೆ. ಮನು ಮುತ್ತಪ್ಪ, ಕೋಡಿರ ಎಂ. ತಮ್ಮಯ್ಯ, ವಾಂಚೀರ ಕೆ. ಅಜಯ್ ಕುಮಾರ್, ಪಂಜದ ಎನ್. ಚಂದ್ರಪ್ರಕಾಶ್ ಚುನಾಯಿತರಾದರು.
ವೀರಾಜಪೇಟೆ ತಾಲೂಕು ಕ್ಷೇತ್ರದಿಂದ ಅಡ್ಡಂಡ ಸಿ. ಕುಶಾಲಪ್ಪ, ಅಜ್ಜಿಕುಟ್ಟಿರ ಎಂ. ಮುತ್ತಪ್ಪ, ಅಜ್ಜಿನಿಕಂಡ ಎಸ್. ಶ್ಯಾಂಚAದ್ರ, ಮೂಕಚಂಡ ಟಿ. ಸುಬ್ಬಯ್ಯ ಅವಿರೋಧವಾಗಿ ಆಯ್ಕೆಗೊಂಡರು. ಸೋಮವಾರಪೇಟೆ ತಾಲೂಕು ಕ್ಷೇತ್ರದಿಂದ ವಿ.ಸಿ.ಅಮೃತ್, ಬಲ್ಲಾರಂಡ ಮಣಿ ಉತ್ತಪ್ಪ, ಎಸ್.ಆರ್. ಸುನಿಲ್ ರಾವ್, ಕೆ.ಟಿ. ಪರಮೇಶ್ ಜಯಗಳಿಸಿದರು.