ಕುಶಾಲನಗರ, ಸೆ. ೨೩ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ-೨೦೨೫ಕ್ಕೆ ಸೋಮವಾರ ಗೊಂದಲದ ನಡುವೆ ಆರಂಭಗೊAಡಿತು.
ತಾಲೂಕಿನ ೩೦೦ಕ್ಕೂ ಹೆಚ್ಚಿನ ಶಿಕ್ಷಕರನ್ನು ಗಣತಿಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಸೋಮವಾರ ಕುಶಾಲನಗರ ಪುರಸಭೆ ಕಚೇರಿಗೆ ಆಗಮಿಸಿದ ಗಣತಿದಾರರು ಕಿಟ್ ವಿತರಣೆ ಮಾಡಲಾಯಿತು. ಬಹುತೇಕ ಗಣತಿದಾರರಿಗೆ ಕಿಟ್ ಸಿಗಲಿಲ್ಲ ಎನ್ನುವ ದೂರುಗಳು ಕೇಳಿಬಂದು ಸಂಜೆ ತನಕ ಕಾಯುವ ಪರಿಸ್ಥಿತಿ ಸೃಷ್ಟಿಯಾಯಿತು.
ಈ ಸಂದರ್ಭ ಗಣತಿಗೆ ನಿಯೋಜನೆಗೊಂಡ ಕೆಲವು ಶಿಕ್ಷಕರು ಮಾತನಾಡಿ, ಗಣತಿದಾರರಿಗೆ ಯಾರು ಮೇಲ್ವಿಚಾರಕರು ಇಲ್ಲ. ಸರಿಯಾದ ತರಬೇತಿ ಕೂಡ ನೀಡಿಲ್ಲ. ಜೊತೆಗೆ ಕುಶಾಲನಗರ ತಾಲೂಕಿನ ಮಹಿಳಾ ಶಿಕ್ಷಕರನ್ನು ದೂರದ ವೀರಾಜಪೇಟೆ ತಾಲೂಕಿಗೆ ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಪ್ರೌಢಶಾಲೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಮತ್ತಿತರರು ಇದ್ದರು