ಮಡಿಕೇರಿ, ಸೆ. ೨೪: ಪೋಷಣ್ ಮಾಸಾಚರಣೆ ಮತ್ತು ಸ್ವಾಸ್ಥನಾರಿ ಸಶಕ್ತ ಕುಟುಂಬ ಅಭಿಯಾನದಡಿ ಗರ್ಭಿಣಿ ಬಾಣಂತಿ ಮಕ್ಕಳು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಆರೋಗ್ಯ ತಪಾಸಣೆ ನಡೆಸಿ ಅನೀಮಿಯ, ಎ.ಚ್.ಬಿ., ಬಿ.ಪಿ., ಶುಗರ್, ಪರಿಶೀಲನೆಯನ್ನು ಸ್ಟೋನ್ ಹಿಲ್ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಸನ್ನ ಕುಮಾರ್, ಇಲಾಖೆಯ ಮೇಲ್ವಿಚಾರಕರು ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್, ಹಿರಿಯ ಆರೋಗ್ಯ ಸಹಾಯಕರಾದ ರೇವತಿ, ಸ್ವಾಗತವನ್ನು ಸ್ಟೋನ್ ಹಿಲ್ ಅಂಗನವಾಡಿ ಕಾರ್ಯಕರ್ತೆ ನಾಗರತ್ನ, ವಂದನಾರ್ಪಣೆಯನ್ನು ರಾಜೇಶ್ವರಿ ನಗರ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕಸಬ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.