ಸೋಮವಾರಪೇಟೆ, ಸೆ. ೨೪: ಆರಂಭದಿAದಲೂ ಅವಾಂತರಗಳ ಆಗರವಾಗಿರುವ ಅಮೃತ್-೨ ಯೋಜನೆಯ ಕಾಮಗಾರಿಗೆ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದು, ಸಾರ್ವಜನಿಕರು, ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವಷ್ಟು ಸಭೆಗಳಲ್ಲಿ ಚರ್ಚೆಯಾದರೂ ಸಂಬAಧಿಸಿದ ಅಭಿಯಂತರರು ಎಂದಿನ ನಿರ್ಲಕ್ಷö್ಯ ವಹಿಸುತ್ತಿದ್ದು, ಇಂದು ನಡೆದ ಪ.ಪಂ. ಸಮಾನ್ಯ ಸಭೆಯಲ್ಲಿಯೂ ಇದೇ ವಿಚಾರ ತೀವ್ರ ಚರ್ಚೆಗೆ ಕಾರಣವಾಯಿತು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಮೃತ್-೨ ಯೋಜನೆಯ ಪ್ರಗತಿ ಬಗ್ಗೆ ಚರ್ಚೆ ನಡೆಯಿತು

ಗುಂಡಿಗೆ ಬಿದ್ದರೆ ನೀವೇ ಹೊಣೆ: ಅಮೃತ್ ೨ ಯೋಜನೆಯಿಂದ ರಸ್ತೆ, ರಸ್ತೆ ಬದಿ ಗುಂಡಿಗಳು ಬಿದ್ದು ತೀವ್ರ ಸಮಸ್ಯೆಯಾಗಿದೆ. ಒಂದೊAದೇ ವಾರ್ಡ್ಗಳನ್ನು ಪೂರ್ಣಗೊಳಿಸಿ ನಂತರ ಮತ್ತೊಂದು ವಾರ್ಡ್ ಕೆಲಸ ಮಾಡಿ ಎಂದು ತಿಳಿಸಲಾಗಿತ್ತು. ಆದರೆ ಎಲ್ಲಾ ವಾರ್ಡ್ಗಳಲ್ಲಿ ಚರಂಡಿ ತೋಡಿ, ಪೈಪ್ ಹಾಕಿದ್ದಾರೆ. ಹಲವು ಕಡೆಗಳಲ್ಲಿ ಗುಂಡಿಗಳನ್ನು ಹಾಗೆ ಬಿಟ್ಟಿದ್ದಾರೆ. ವಾಹನ ಸವಾರರು ಬಿದ್ದು ಗಾಯಾಳುಗಳಾಗುತ್ತಿದ್ದಾರೆ ಎಂದು ಸದಸ್ಯ ಚಂದ್ರು, ಮೃತ್ಯುಂಜಯ, ಸಂಜೀವ ಅವರುಗಳು ಸಭೆಯ ಗಮನ ಸೆಳೆದರು.

ಸಿ.ಕೆ. ಸುಬ್ಬಯ್ಯ ರಸ್ತೆ, ಕುಳ್ಳಾರಿಗುಡಿ ಬಳಿಯಲ್ಲಿ ಒಂದು ಅಡಿಗಳಷ್ಟು ಗುಂಡಿ ಬಿದ್ದಿದೆ. ವಾರ್ಡ್ಗಳಲ್ಲಿ ಗುಂಡಿಗಳಿAದ ಭಾರೀ ಸಮಸ್ಯೆಯಾಗುತ್ತಿದೆ ಎಂದು ಇತರ ಸದಸ್ಯರು ದನಿಗೂಡಿಸಿದರು. ರಸ್ತೆ ಬದಿಯ ಗುಂಡಿಗೆ ಯಾರಾದರೂ ಬಿದ್ದು ಸಮಸ್ಯೆಯಾದರೆ ನೀವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸಂಬAಧಿಸಿದ ಅಮೃತ್ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಅವರಿಗೆ ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಎಚ್ಚರಿಸಿದರು.

ಈ ಹಿಂದೆ ಅಳವಡಿಸಿದ್ದ ಇಂಟರ್ ಲಾಕ್‌ಗಳನ್ನು ತೆಗೆಯಲಾಗಿದ್ದು, ಮತ್ತೆ ಹಾಕಿಲ್ಲ. ಮಕ್ಕಳು, ಮಹಿಳೆಯರು ಓಡಾಡುತ್ತಿದ್ದಾರೆ. ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿಲ್ಲ. ೧೫ ದಿನಗಳೊಳಗೆ ಗುಂಡಿ ಮುಚ್ಚಬೇಕು. ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಬೇಕು ಎಂದು ಮುಖ್ಯಾಧಿಕಾರಿ ಸೂಚಿಸಿದರು.

ಈಗಾಗಲೇ ಟೆಂಡರ್ ಅವಧಿ ಮೀರಿರುವುದರಿಂದ, ಹೆಚ್ಚುವರಿ ಕಾಮ ಗಾರಿಗಾಗಿ ಹಣವನ್ನು ಪಟ್ಟಣ ಪಂಚಾಯಿತಿಯಿAದ ಭರಿಸುವುದಿಲ್ಲ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡುತ್ತೇವೆ ಎಂದು ಮುಖ್ಯಾಧಿಕಾರಿ ಹೇಳಿದರು. ಇಂಜಿನಿಯರ್‌ಗಳಿAದಾಗಿ ನಾವುಗಳು ಸಾರ್ವಜನಿಕರಿಂದ ನಿಂದನೆಯ ಮಾತು ಕೇಳಬೇಕಾಗಿದೆ ಎಂದು ಮೃತ್ಯುಂಜಯ ಹೇಳಿದರು. ೪ಐದನೇ ಪುಟಕ್ಕೆ ಜಾಕ್ವೆಲ್, ಯಡವನಾಡು ಪಂಪ್ ಹೌಸ್, ಬೇಲೂರುಬಾಣೆ ವಾಟರ್ ಟ್ಯಾಂಕ್ ಕಾಮಗಾರಿಗಳು ಮುಗಿದಿದೆ. ಪಟ್ಟಣದಲ್ಲಿ ೧೮ ಕಿ.ಮೀ. ಪೈಪ್ ಲೈನ್ ಮಾಡಬೇಕಿತ್ತು. ಒಂದು ಕಿ.ಮೀ. ಬಾಕಿಯಿದೆ. ಮಳೆಗೂ ಮುಂಚೆ ವೆಟ್ ಮಿಕ್ಸ್ ಹಾಕಲಾಗಿದೆ. ಮಳೆ ಸಂದರ್ಭ ಡಾಂಬರು ಹಾಕಲು ಸಾಧ್ಯವಿಲ್ಲ. ಪಟ್ಟಣದಲ್ಲಿ ೧,೭೦೦ ಪೈಪ್ ಲೈನ್ ಸಂಪರ್ಕ ಕಲ್ಪಿಸಬೇಕಿದ್ದು, ಇದರಲ್ಲಿ ೯೦೦ ಆಗಿದೆ. ಮುಂದಿನ ಒಂದು ತಿಂಗಳೊಳಗೆ ತುರ್ತು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅಭಿಯಂತರ ಪ್ರಸನ್ನ ಹೇಳಿದರು.

ಮತ್ತೆ ಸದ್ದು ಮಾಡಿದ ಕಡತ ನಾಪತ್ತೆ ಪ್ರಕರಣ: ಪೌರ ಕಾರ್ಮಿಕರಿಗೆ ನಿವೇಶನ ಒದಗಿಸುವ ಸಂಬAಧ ನಡಾವಳಿಗಳು, ದಾಖಲೆಗಳಿದ್ದ ಕಡತ ನಾಪತ್ತೆ ಪ್ರಕರಣದ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಶೀಲಾ ಡಿಸೋಜ ಪ್ರಶ್ನಿಸಿದರು. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ ಹಿಂಬರಹ ನೀಡಲಾಗಿದೆ. ಕಡತ ಈವರೆಗೆ ಸಿಕ್ಕಿಲ್ಲ. ಮುಂದೆ ಆಡಳಿತಾತ್ಮಕ ಕ್ರಮ ವಹಿಸಲಾಗುವುದು. ಕಡತ ಲಭಿಸುವವರೆಗೆ ಪ್ರಕರಣ ನಡೆಯುತ್ತದೆ ಎಂದು ಮುಖ್ಯಾಧಿಕಾರಿ ಹೇಳಿದರು. ಇದೇ ವಿಚಾರವಾಗಿ ಸದಸ್ಯ ಜೀವನ್ ಮಧ್ಯೆ ಪ್ರವೇಶಿಸಿ, ಕಡತ ನಾಪತ್ತೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಸಿಬ್ಬಂದಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಪತ್ರ ನೀಡಿದ್ದಾರೆ. ಇದನ್ನು ಹೇಗೆ ಪರಿಗಣಿಸಿದಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಮೃತ್ಯುಂಜಯ ಅವರೂ ದನಿಗೂಡಿಸಿದರು. ಈ ಸಂದರ್ಭ ಸದಸ್ಯ ಬಿ.ಆರ್. ಮಹೇಶ್ ಅವರು ಸಿಬ್ಬಂದಿಯಿAದ ಮನವಿ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಳ್ಳುವಂತೆ ಮಾತನಾಡಿದರು. ಇದು ಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಕಡತ ಎಲ್ಲಿದೆ? ಸಿ.ಸಿ. ಕ್ಯಾಮೆರಾದಲ್ಲಿ ಕಡತ ತೆಗೆದುಕೊಂಡು ಹೋಗಿರುವುದು ಸೆರೆಯಾಗಿದೆ. ಪಂಚಾಯಿತಿಯಿAದ ಈವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ನಾಮನಿರ್ದೇಶಿತ ಸದಸ್ಯ ಹೆಚ್.ಎ. ನಾಗರಾಜ್ ಪ್ರಶ್ನಿಸಿದರು. ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ಕಡತ ನಾಪತ್ತೆ ಪ್ರಕರಣದ ಬಗ್ಗೆ ಇಲಾಖಾ ಮಟ್ಟದಲ್ಲಿ ಕ್ರಮ ಜರುಗುತ್ತದೆ. ಕಡತ ಸಿಗುವವರೆಗೆ ಬಿಡುವುದಿಲ್ಲ. ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡುವಂತೆ ಈ ಹಿಂದಿನ ಸಭೆಯಲ್ಲಿಯೇ ನಿರ್ಣಯ ಮಾಡಲಾಗಿದೆ. ಮತ್ತೆ ಅವರನ್ನು ವಾಪಸ್ ತೆಗೆದುಕೊಳ್ಳಲು ಕಾನೂನು ಭಾಗದಲ್ಲಿ ನಮಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಈ ಬಗೆಗಿನ ಚರ್ಚೆಗೆ ತೆರೆಬಿದ್ದಿತು.

ಶುಚಿತ್ವಕ್ಕೆ ಸದಸ್ಯರ ಆಗ್ರಹ: ವಾರ್ಡ್ನಲ್ಲಿ ಶುಚಿತ್ವ ಕಾಪಾಡುತ್ತಿಲ್ಲ. ಪೌರ ಕಾರ್ಮಿಕರು ಬರುತ್ತಿಲ್ಲ. ಚರಂಡಿ ದುರಸ್ತಿಪಡಿಸಿಲ್ಲ. ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು ನಿಂತಿವೆ. ಅಂತಹ ಜಾಗದ ಮಾಲೀಕರಿಗೆ ನೋಟಿಸ್ ನೀಡಿಲ್ಲ. ವಾರ್ಡ್ ಮಂದಿ ಪ್ರಶ್ನಿಸುತ್ತಿದ್ದಾರೆ. ಕನಿಷ್ಟ ವಾರಕ್ಕೊಮ್ಮೆಯಾದರೂ ವಾರ್ಡ್ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಸದಸ್ಯ ಬಿ.ಆರ್. ಶುಭಕರ್, ನಾಗರತ್ನ ಅವರುಗಳು ಆಗ್ರಹಿಸಿದರು. ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚಲು ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ನಮ್ಮ ಅನುದಾನ ನಮಗೆ ನೀಡಿ: ನಾಮನಿರ್ದೇಶಿತ ಸದಸ್ಯ ಹೆಚ್.ಎ. ನಾಗರಾಜು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಶೇ.೨೪ರ ಅನುದಾನದಡಿ ಹಣ ಮೀಸಲಿಡಬೇಕಿದ್ದರೂ ಕೆಲಸ ಕಾರ್ಯಗಳು ಆಗುತ್ತಿಲ್ಲ. ಎಸ್.ಸಿ. ಎಸ್.ಟಿ. ನಿವೇಶನದ ಫೈಲ್ ಕಳವು ಆದರೂ ಕ್ರಮ ಕೈಗೊಂಡಿಲ್ಲ. ಪರಿಶಿಷ್ಟ ಜಾತಿ, ಪಂಗಡದ ಮೀಸಲು ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ನೀಡಿ; ಸಾಮಾನ್ಯ ನಿಧಿಯಡಿ ನಾವು ಕೇಳುವುದಿಲ್ಲ ಎಂದು ಹೇಳಿದರು.ಇದೇ ಸಂದರ್ಭ ಸಭೆಯಲ್ಲಿ ಅಂಬೇಡ್ಕರ್ ಫೋಟೋ ಪ್ರದರ್ಶಸಿದ ನಾಗರಾಜು, ಇವರು ನೀಡಿದ ಮೀಸಲಾತಿಯನ್ನಷ್ಟೇ ನಾವು ಕೇಳುತ್ತಿದ್ದೇವೆ. ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಯಾರಿಗೆ ಯಾವುದು ಅವಶ್ಯಕತೆ ಇದೆಯೋ ಎಂಬುದನ್ನು ಪರಾಮರ್ಶಿಸಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೇಳಿದರು.ಹಳೆ ಕಾರ್ಪೋರೇಷನ್ ಬ್ಯಾಂಕ್ ಇದ್ದ ಜಾಗದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಜಾಗದ ಮಾಲೀಕರಿಗೆ ನೋಟಿಸ್ ನೀಡಬೇಕು. ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಕಾರು ನಿಲ್ದಾಣ ಸಮೀಪ ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗಮನ ಹರಿಸಬೇಕೆಂದು ಶೀಲಾ ಡಿಸೋಜ ಹೇಳಿದರು.ಪೌರ ಕಾರ್ಮಿಕರೂ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಮೂರು ಹಂತದಲ್ಲಿ ನಿವೇಶನ ವಿತರಣೆಗೆ ಕ್ರಮ ವಹಿಸಲಾಗುವುದು. ಗೃಹಭಾಗ್ಯ, ವಸತಿ ರಹಿತ ಫಲಾನುಭವಿಗಳು, ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಿ, ಮನೆ ನಿರ್ಮಿಸಲು ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಕೃಷ್ಣಪ್ರಸಾದ್ ತಿಳಿಸಿದರು. ಅಂತೆಯೇ ಪಟ್ಟಣದ ಹೈಟೆಕ್ ಮಾರುಕಟ್ಟೆಯನ್ನು ಬಹು ಮಹಡಿ ವಾಹನ ಪಾರ್ಕಿಂಗ್ ಕಟ್ಟಡವನ್ನಾಗಿ ಪರಿವರ್ತಿಸುವ ಸಂಬAಧ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಸಭೆ ಅನುಮೋದನೆ ನೀಡಿತು.ಎಸ್.ಎಫ್.ಸಿ., ೧೫ನೇ ಹಣಕಾಸು, ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಕುಡಿಯುವ ನೀರು, ಪಟ್ಟಣ ಪಂಚಾಯಿತಿ ನಿಧಿ ಹಾಗೂ ಹಿಂದಿನ ಸಾಲುಗಳಲ್ಲಿ ಕಾಮಗಾರಿ ನಿರ್ವಹಿಸಿ ಉಳಿಕೆಯಾದ ಅನುದಾನದಲ್ಲಿ ಕರೆಯಲಾದ ಟೆಂಡರ್‌ಗಳಿಗೆ ಘಟನೋತ್ತರ ಮಂಜೂರಾತಿ ನೀಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯರುಗಳಾದ ವೆಂಕಟೇಶ್, ವಿನಿ, ಅಭಿಯಂತರ ಹೇಮಕುಮಾರ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ಅಧಿಕಾರಿಗಳಾದ ರೂಪಾ, ಜೀವನ್ ಅವರುಗಳು ಇದ್ದರು.