ಪೊನ್ನAಪೇಟೆ, ಸೆ. ೨೪ : ಕಾಫಿ ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊನ್ನAಪೇಟೆ ತಾಲೂಕಿನ ಕಿರುಗೂರು ಗ್ರಾಮದ ದೊಡ್ಡ ಮಾವಿನ ಮರ ಜಂಕ್ಷನ್ ಬಳಿಯ ನಿವಾಸಿ ಪೊಕ್ಕಳಿಚಂಡ ಗಣೇಶ್ ಉತ್ತಪ್ಪ ಎಂಬವರ ಮನೆಯಿಂದ ೪೧ ಕೆ.ಜಿ.ಯಷ್ಟು ಕಾಫಿ ಕಳವು ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳನ್ನು ಪೊನ್ನಂಪೇಟೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕೊಪ್ಪಿಸಿದ್ದಾರೆ.

ಮAಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೇರಿ ಗ್ರಾಮದ ಹರ್ಷ (೨೬) ಹಾಗೂ ಆತನ ಪತ್ನಿ ವೀಣಾ ಬಂಧಿತ ಆರೋಪಿಗಳು.

ಗಣೇಶ್ ಉತ್ತಪ್ಪ ಅವರು ಮಡಿಕೇರಿಗೆ ತೆರಳಿದ್ದ ಸಂದರ್ಭ, ಕಳೆದ ಎರಡು ದಿನಗಳ ಹಿಂದೆ ಗಣೇಶ್ ಅವರ ಮನೆಯ ಕೆಲಸಕ್ಕೆಂದು ಬಂದಿದ್ದ ಹುದಿಕೇರಿ ಗ್ರಾಮದ ಕಾಫಿ ಬೆಳೆಗಾರರೊಬ್ಬರ ಲೈನ್‌ಮನೆಯಲ್ಲಿ ವಾಸವಿದ್ದ ಆರೋಪಿಗಳು ಕಾಫಿಯನ್ನು ಕಳವು ಮಾಡಿ, ೪ಐದನೇ ಪುಟಕ್ಕೆ (ಮೊದಲ ಪುಟದಿಂದ) ಬಸ್ ತಂಗುದಾಣಕ್ಕೆ ತಂದು ವಾಹನಕ್ಕಾಗಿ ಕಾಯುತ್ತಿದ್ದಾಗ ಅವರ ಪಕ್ಕದಲ್ಲಿದ್ದ ಕಾಫಿ ಚೀಲವನ್ನು ಕಂಡ ಗ್ರಾಮದ ಮಹಿಳೆಯೋರ್ವರು ಗ್ರಾಮದ ಯುವಕರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಸ್ಥಳಕ್ಕಾಗಮಿಸಿದ ಯುವಕರು ದಂಪತಿಯನ್ನು ಪ್ರಶ್ನಿಸಿದಾಗ ಕಾಫಿ ಕಳ್ಳತನ ಎಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ನವೀನ್ ಅವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಕಳವು ಮಾಡಿದ್ದ ಕಾಫಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕೊಪ್ಪಿಸಿದ್ದಾರೆ.