ವೀರಾಜಪೇಟೆ, ಸೆ. ೨೪ : ವೀರಾಜಪೇಟೆಯ ಕೊಡಗು ಮಾಜಿ ಸೈನಿಕರ ಸಹಕಾರ ಸಂಘ ನಿಯಮಿತ ಆಶ್ರಯದಲ್ಲಿ ವೀರಾಜಪೇಟೆ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮರ ದಿನಾಚರಣೆಯ ಅಂಗವಾಗಿ ನಿ. ಲೆಪ್ಟಿನೆಂಟ್ ಕರ್ನಲ್ ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಅವರುಗಳು ಪುಷ್ಪಗುಚ್ಚವಿರಿಸಿ ಶ್ರದ್ದಾಂಜಲಿ ಅರ್ಪಿಸಿದರು.
ವಿರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್, ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಅರಮೇರಿ ಕಳಂಚೇರಿ ಮಠದ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗು ಹೆಗ್ಗಡೆ ಸಮಾಜ, ಕೊಡವ ಮುಸ್ಲಿಂ ಅಸೋಸಿಯೇಷನ್, ಕೊಡಗು ಮಲೆಯಾಳಿ ಸಮಾಜ, ಕರ್ನಾಟಕ ಸಂಘ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲೆ, ಕೊಡವ ತಕ್ಕ್ ಜನಾಂಗದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಹಿಂದು ಮಲೆಯಾಳಿ ಸಮಾಜ, ವೀರಾಜಪೇಟೆ ಗೋಲ್ಡನ್ ಫಾರಂ, ಕಾವೇರಿ ಲಘುವಾಹನ ಚಾಲಕರ ಮಾಲೀಕರ ಸಂಘ, ವಿವಿಧ ಶಾಲಾ ಮುಖ್ಯಸ್ಥರುಗಳು ಮಾಜಿ ಸೈನಿಕರು, ಸಾರ್ವಜನಿಕರು ಪುಷ್ಪಗುಚ್ಚ ಇರಿಸಿ ಶ್ರದ್ದಾಂಜಲಿ ಅರ್ಪಿಸಿದರು. ಹುತಾತ್ಮರ ದಿನಾಚರಣೆಯ ಅಂಗವಾಗಿ ಯೋಧರ ಸ್ಮಾರಕ ಸ್ಥಂಭಕ್ಕೆ ಆವರಣದಲ್ಲಿ ಜಿಲ್ಲಾ ಸಶಶ್ತç ಮೀಸಲು ಪಡೆಯ ಚೆನ್ನಕೇಶವ ನೇತೃತ್ವದಲ್ಲಿ ಮೂರು ಸುತ್ತು ಕುಶಲತೋಪು ಹಾರಿಸಲಾಯಿತು.
ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ, ಉಪಾಧ್ಯಕ್ಷ ರಾಜ ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ, ನಿರ್ದೇಶಕರುಗಳಾದ ಎಂ.ಕೆ. ಸಲಾಂ, ಪಟ್ರಪಂಡ ಎಂ.ಕರುAಬಯ್ಯ, ಕೊಂಗAಡ ಎ. ಭೀಮಯ್ಯ, ಅಣ್ಣಾಳಮಾಡ ಡಿ. ಸುಬ್ಬಯ್ಯ, ಬಾಳೆಕುಟ್ಟೀರ ಎ. ಬೋಪಯ್ಯ, ಅಪ್ಪಯ್ಯ ಹೆಚ್.ಕೆ. ಕಬ್ಬಚ್ಚಿರ ಎ. ಬೋಪಣ್ಣ, ಪಟ್ರಪಂಡ ಎ. ಚಂಗಪ್ಪ ಉಪಸ್ಥಿತರಿದ್ದರು.
ಇದೇ ಸಂದರ್ಭ ಸಾರ್ವಜನಿಕರು, ಮಾಜಿ ಸೈನಿಕರ ಸಂಘದ ಸದಸ್ಯರುಗಳು, ಅವರ ಕುಟುಂಬಸ್ಥರು, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಪ್ರಮುಖರು, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದು ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ವಿವಿಧ ಶಾಲೆಗಳ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.