ಮಡಿಕೇರಿ, ಸೆ. ೨೪: ರಾಜ್ಯ ಸರಕಾರದ ವತಿಯಿಂದ ರಾಜ್ಯಾದ್ಯಂತ ತಾ.೨೨ ರಿಂದ ಪ್ರಾರಂಭಗೊAಡ ಜಾತಿ ಸಮೀಕ್ಷೆಯನ್ನು ಕೈಗೊಳ್ಳಲು ಸಮೀಕ್ಷೆಗೆ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗೆ ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲಸ ಕಷ್ಟಸಾಧ್ಯವಾಗುತ್ತಿದ್ದು ಕರ್ನಾಟಕ ರಾಜ್ಯ ಪ್ರೌಢಾಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ ಈ ಸಂಬAಧ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಸಮೀಕ್ಷೆ ನಡೆಸಲು ಆ್ಯಪ್ ಬಳಸಬೇಕಾಗಿದ್ದು, ಕೊಡಗಿನ ಗುಡ್ಡಗಾಡು ಪ್ರದೇಶದ ಬಹುತೇಕ ಕಡೆ ಅಂತರ್ಜಾಲ ಸಂಪರ್ಕವಿಲ್ಲದೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅಸಾಧ್ಯವಾಗಿದೆ. ಸಾರ್ವಜನಿಕರ ಮನೆಗಳ ಲೊಕೇಷನ್ ಮಾಹಿತಿಯೂ ನೆಟ್‌ವರ್ಕ್ ಸಮಸ್ಯೆಯಿಂದ ಸರಿಯಾಗಿ ನಮೂದಾಗುತ್ತಿಲ್ಲ. ಶಿಕ್ಷಕರು ತಾವುಗಳು ಸೇವೆ ಸಲ್ಲಿಸುತ್ತಿರುವ ವ್ಯಾಪ್ತಿಯಲ್ಲದೆ ಇತರೆಡೆ ಸಮೀಕ್ಷೆ ನಡೆಸುವ ಅನಿವಾರ್ಯತೆ ಇರುವುದರಿಂದ ಸಮೀಕ್ಷೆ ನಡೆಸಲು ಕಷ್ಟಸಾಧ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು ಬಹುತೇಕ ಕಾರ್ಮಿಕರು ಸಂಜೆ ೫ ಗಂಟೆಯ ನಂತರ ಮನೆಗೆ ಆಗಮಿಸುವುದರಿಂದ ಇಷ್ಟು ಹೊತ್ತಿಗೆ ಸಮೀಕ್ಷೆ ನಡೆಸುವುದು ಆನೆಗಳ ಕಾಟದಿಂದಾಗಿ ಅಪಾಯಕಾರಿ ಆಗಿದೆ ಎಂದು ಸಂಘದ ಮನವಿ ಪತ್ರದಲ್ಲಿ ಉಲ್ಲೇಖಿತವಾಗಿದೆ.