ಮಡಿಕೇರಿ, ಸೆ. ೨೪: ಸಾರ್ವಜನಿಕರ ದೂರಿನ ಹಿನ್ನೆಲೆ ವೀರಾಜಪೇಟೆಯ ಪೊಲೀಸ್ ಠಾಣೆಯಿಂದ ಪೆರಂಬಾಡಿ ಚೆಕ್ಪೋಸ್ಟ್ವರೆಗೆ ಕೈಗೊಂಡ ರಸ್ತೆ, ಮೋರಿ ಕಾಮಗಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ತಾಂತ್ರಿಕ ತಜ್ಞರೊಂದಿಗೆ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ವೀಣಾನಾಯಕ್, ಸಿಬ್ಬಂದಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್, ಸಹಾಯಕ ಅಭಿಯಂತರ ನವೀನ್ ಮೊಣ್ಣಪ್ಪ, ಸಿಬ್ಬಂದಿಗಳು ಇದ್ದರು.