ಕಡಂಗ, ಸೆ. ೨೪: ಪ್ರವಾದಿ ಪೈಗಂಬರ್ ಅವರ ೧,೫೦೦ನೇ ಜನ್ಮ ದಿನಾಚರಣೆಯ ಅಂಗವಾಗಿ ಎಮ್ಮೆಮಾಡು ಕೆ.ಎಂ.ಜೆ, ಎಸ್.ವೈ.ಎಸ್., ಎಸ್.ಎಸ್ ಎಫ್. ವತಿಯಿಂದ ಏರ್ಪಡಿಸಿದ ಹುಬ್ಬುರಸೂಲ್ ಕಾನ್ಫರೆನ್ಸ್ ಶುಕ್ರವಾರ ಜುಮಾ ನಮಾಜಿನ ಬಳಿಕ ಕೆ.ಎಂ. ಜೆ. ಅಧ್ಯಕ್ಷರಾದ ಉಸ್ಮಾನ್ ಹಾಜಿ ದ್ವಜಾರೋಹಣ ನಿರ್ವಹಿಸುವ ಮೂಲಕ ಚಾಲನೆ ನೀಡಲಾಯಿತು.

ಶನಿವಾರ ಬೆಳಿಗ್ಗೆ ಸೂಫಿ ಶಹೀದ್ (ರ.ಅ) ದರ್ಗಾದಲ್ಲಿ ಮೌಲೂದ್ ದುಆ ಮಜ್ಲಿಸ್ ನಡೆಸಲಾಯಿತು. ಮಧ್ಯಾಹ್ನ ತಾಜುಲ್ ಉಲಮಾ ವೇದಿಕೆಯಲ್ಲಿ ಕುಂಭಡಾಜೆ ಉಸ್ತಾದ್ ಇಗ್ನೆöÊಟ್ ತರಗತಿ ನಡೆಸಲಾಯಿತು. ಸಂಜೆ ೪ ಗಂಟೆಗೆ ಸಂದೇಶ ಜಾಥಾವನ್ನು ಕೊಪ್ಪತಾಣೆಯಿಂದ ಸಾಧತ್ ನಗರದವರೆಗೆ ದ್ವಿಚಕ್ರ ವಾಹನದಲ್ಲು, ಕಾಲ್ನಡಿಗೆಯ ಮೂಲಕ ರಿಫಾಯಿಯ್ಯಾ ದಫ್ ಸಂಘ ಹಾಗೂ ವಿದ್ಯಾರ್ಥಿಗಳ ದಫ್ ಪ್ರದರ್ಶನದೊಂದಿಗೆ ಸಂದೇಶ ಜಾಥಾ ಯಶಸ್ವಿಯಾಗಿ ನಡೆಯಿತು. ಜಾಥಾ ಮಧ್ಯದಲ್ಲಿ ಅಲಿ ಉಸ್ತಾದ್ ಖಬರ್ ಜಿಯಾರತ್ತ್, ಮೇಯಣೆಯಲ್ಲಿ ತಂಪು ಪಾನೀಯ ವಿತರಿಸಲಾಯಿತು. ಸೂಫಿ ಶಹೀದ್ ದರ್ಗ ಹತ್ತಿರ ಸಯ್ಯದ್ ಇಲ್ಯಾಸ್ ತಂಗಳ್ ದುಆ ನೇತೃತ್ವ ನೀಡಿದಲ್ಲದೆ ತಾಜುಲ್ ಉಲಮಾ ನಗರದಲ್ಲಿ ಸಮಾಪ್ತಿಗೊಳಿಸಿ ಸಯ್ಯಿದ್ ಸಮೀಹ್ ತಂಗಳ್ ಪ್ರಾಸ್ತಾವಿಕ ಭಾಷಣ ನುಡಿದರು.

ಮಗರಿಬ್ ನಮಾಜ್ ಬಳಿಕ ವೇದಿಕೆಯಲ್ಲಿ ಅಸ್ಮಾಲ್ ಹುಸ್ನಾ ವಾರ್ಷಿಕ ರಾತಿಬ್ ಸಯ್ಯದರೂ ಉಲಮಾಗಳು ಜಮಾಅತ್ ಅಧ್ಯಕ್ಷರಾದ ಹುಸೇನ್ ಸಖಾಫಿ, ಮುಹಮ್ಮದ್ ಸಖಾಫಿರವರ ನೇತೃತ್ವದಲ್ಲಿ ನಡೆಯಿತು. ನಂತರ ಹುಬ್ಬು ರಸೂಲ್ ಕಾನ್ಫರೆನ್ಸ್ ವೇದಿಕೆಯಲ್ಲಿ ಎಸ್.ಎಸ್.ಎಫ್. ಜಿಲ್ಲಾ ನೇತೃತ್ವ ಹಾರಿಸ್ ಝುಹಿರಿ ಸ್ವಾಗತಿಸಿದರು. ಕಿರಾಅತ್ ಹಾಫಿಝ್ ಶಾಕಿರ್ ಉಸ್ತಾದ್ ನೆರವೇರಿಸಿದರು.

ಎಸ್.ವೈ.ಎಸ್. ಕರ್ನಾಟಕ ದಹ್ ವ ಉಪಾಧ್ಯಕ್ಷರು ಸಯ್ಯಿದ್ ಇಲ್ಯಾಸ್ ಅಲ್ ಹೈದರೂಸಿ ಉದ್ಘಾಟನೆ ನೆರವೇರಿಸಿದರು, ಕಾನ್ಫರೆನ್ಸ್ ಚೆರ್ಮನ್ ಉಮ್ಮರ್ ಸಖಾಫಿ ಅಧ್ಯಕ್ಷ ಸ್ಥಾನ ಅಲಂಕರಿಸಿ ಕಾರ್ಯಕ್ರಮದಲ್ಲಿ ಪ್ರವಾದಿ ಸಂದೇಶ ನುಡಿಗಳನ್ನು ಉಸ್ತಾದ್ ಮುಹಮ್ಮದ್ ಫಾಝಿಲ್ ನೂರಾನಿ ಮುಖ್ಯ ಭಾಷಣಗೈದರು. ಪ್ರಾರ್ಥನೆಗೆ ಸಯ್ಯಿದ್ ಶಿಹಾಬುದ್ದಿನ್ ಅಲ್ ಹೈದರೂಸಿ ಕಿಲ್ಲೂರ್ ತಂಘಲ್ ನೇತೃತ್ವ ವಹಿಸಿದರು.

ವೇದಿಕೆಯಲ್ಲಿ ಸಯ್ಯಿದ್ ಫಳಲು ತಂಗಳ್, ಸಯ್ಯಿದ್ ಸಮೀಮ್ ತಂಗಳ್, ಸಯ್ಯಿದ್ ನುಮಾನ್ ತಂಗಳ್, ಸಯ್ಯಿದ್ ಝಕರಿಯ್ಯ ತಂಗಳ್ ಅಬೂಬಕ್ಕರ್ ಸಖಾಫಿ ಪಿ.ಎ, ಎಸ್.ವೈ.ಎಸ್. ಅಧ್ಯಕ್ಷರು ನಜೀರ್ ಭಾಖವಿ, ಕಾರ್ಯದರ್ಶಿ ಸೌಕತ್ ಸಿ.ಎ. ರೀಫಯ್ ಕಲ್ಫ ಮಾನುಕ್ಕ ಜಕರಿಯ್ಯ ಔಹರಿ, ಅಬ್ದುಲ್ ರಹಿಮಾನ್ ಪಿ.ಎ. ಹಾರಿಸ್ ಸಿ.ಕೆ. ಉಸ್ಮಾನ್ ಮಂದಾಲ್. ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅಶ್ರಫ್ ನಿರ್ವಹಿಸಿದರು.