ಮಡಿಕೇರಿ, ಸೆ. ೨೫: ಕಾಫಿ ಕ್ಷೇತ್ರದಲ್ಲಿ ಸಾಧನೆಗೈದ ಜಿಲ್ಲೆಯ ಸಾಧಕರಿಗೆ ತಾ. ೨೪ ರಂದು ಗಾಂಧಿ ಮೈದಾನದಲ್ಲಿ ನಡೆದ ಕಾಫಿ ದಸರಾ ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾದ ಮಾಜಿ ಅಧ್ಯಕ್ಷ, ಬೆಟ್ಟಗೇರಿಯ ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ಕುಂದ ಗ್ರಾಮದ ಪ್ರಗತಿಪರ ಕೃಷಿಕರಾದ ಕೊಡಂದೆರ ನರೇನ್ ಕುಟ್ಟಯ್ಯ, ಕಿರಗಂದೂರಿನ ಪ್ರಗತಿಪರ ಕೃಷಿಕ ಎಸ್.ಎಂ. ಚಂಗಪ್ಪ, ಎಡದಂಟೆ ಗ್ರಾಮದ ಪ್ರಗತಿಪರ ಕೃಷಿಕ ಲವ ಎಡದಂಟೆ, ಪೊನ್ನಂಪೇಟೆ ಹುದೂರು ಗ್ರಾಮದ ಪ್ರಗತಿಪರ ಕೃಷಿಕ ಡಿ.ಪಿ. ರವಿಶಂಕರ್, ಕೊಡ್ಲಿಪೇಟೆಯ ಕಾಫಿ ಸಸಿ ಕೃಷಿಕರಾದ ಡಿ.ವೈ. ಅಬ್ದುಲ್ ರಜಾಕ್, ಮಡಿಕೇರಿಯ ಹಿರಿಯ ಕಾಫಿ ಉದ್ಯಮಿ ನಿಜಾಮುದ್ದೀನ್ ಸಿದ್ದಿಕಿ, ತಾಕೇರಿಯ ಸಿರಿ ಸ್ವಸಹಾಯ ಮಹಿಳಾ ಸಂಘ, ಮಸಗೋಡು ಗ್ರಾಮದ ಪ್ರಗತಿಪರ ಕೃಷಿಕ ವಿಕ್ರಂ, ಚೆಟ್ಟಳ್ಳಿಯ ಮಿಶ್ರ ಬೆಳೆ ಕೃಷಿಕ ರಾಬರ್ಟ್ ಅವರುಗಳು ಸನ್ಮಾನ ಸ್ವೀಕರಿಸಿದರು.