ಗುಡ್ಡೆಹೊಸೂರು, ಸೆ. ೨೫: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಎಂ. ಸಾಗರ್ ಅಧ್ಯಕ್ಷತೆಯಲ್ಲಿ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮತ್ತು ಕೂಡಿಗೆ ವೃತ್ತದ ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಅವರುಗಳು ಹಾಜರಿದ್ದರು. ಹೆಚ್ಚು ಹಾಲನ್ನು ಸಂಘಕ್ಕೆ ನೀಡುವವರನ್ನು ಗುರುತಿಸಿ ಬಹುಮಾನಗಳನ್ನು ನೀಡಲಾಯಿತು.

ಕಾರ್ಯದರ್ಶಿ ನವೀನ್, ಉಪಾಧ್ಯಕ್ಷೆ ಸುಲೋಚನ, ನಿರ್ದೇಶಕರುಗಳಾದ ಬಿ.ಎಸ್. ಧನಪಾಲ್, ಪಿ.ಬಿ. ಯತೀಶ್, ಬಿ.ವಿ. ಮೋಹನ್ ಕುಮಾರ್, ಸಿ.ಬಿ. ಪಳಂಗಪ್ಪ, ಕೆ.ಆರ್. ಗುರುಪ್ರಸಾದ್, ಬಿ.ಎನ್. ಕಾಶಿ, ಬಿ.ಎಸ್. ಶುಭಶೇಖರ್, ಎಂ. ಅಭಿಷೇಕ್, ಎಸ್.ಆರ್. ಕಮಲ, ಸಿ. ಕಮಾಲಾಕ್ಷಿ, ಬಸಮ್ಮ ಅವರುಗಳು ಉಪಸ್ಥಿತರಿದ್ದರು.