ಚೆಟ್ಟಳ್ಳಿ, ಸೆ. ೨೫: ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಒತ್ತೋರ್ಮೆ ಕೂಟ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆಯಿತು. ಹಿರಿಯರಾದ ಕೊಂಗೇಟೀರ ಚಂಗಪ್ಪ ಆಯುಧ ಪೂಜೆ ನೆರವೇರಿಸಿದರು. ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯನವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು.
ಸಮಾಜದ ಮಹಾಸಭೆ
ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಅಧ್ಯಕ್ಷರಾದ ಮುಳ್ಳಂಡ ರತ್ತು ಚಂಗಪ್ಪರವರ ಅಧ್ಯಕ್ಷತೆಯಲ್ಲಿ ಮಾಹಾಸಭೆ ನಡೆಯಿತು.
ಪುತ್ತರಿರ ಸೀತಮ್ಮ ಮೊಣ್ಣಪ್ಪ ಪ್ರಾರ್ಥಿಸಿ, ಪುತ್ತರಿರ ಕಾಶಿ ಸುಬ್ಬಯ್ಯ ಸ್ವಾಗತಿಸಿ, ಪಳಂಗAಡ ಗೀತಾ ಸುಬ್ಬಯ್ಯ, ಮುಳ್ಳಂಡ ಮಾಯಮ್ಮ ತಮ್ಯಯ್ಯ, ಪಳಂಗAಡ ಸುಮಿ ಅಪ್ಪಯ್ಯ ಹಾಗೂ ಪುತ್ತರಿರ ಗಂಗು ಅಚ್ಚಯ್ಯ ಸಮಾಜದ ಸಮೂಹ ಗೀತೆ ಹಾಡಿದರು.
ರತ್ತು ಚಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಬಟ್ಟೀರ ರಕ್ಷು ಕಾಳಪ್ಪ, ಉಪಾಧ್ಯಕ್ಷ ಬಿದ್ದಂಡ ಮಾದಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ, ಖಜಾಂಚಿ ಕೆಚ್ಚೆಟ್ಟೀರ ರತಿಕಾರ್ಯಪ್ಪ, ನಿರ್ದೇಶಕರಾದ ಬಟ್ಟೀರ ರಕ್ಷು ಕಾಳಪ್ಪ, ಪುತ್ತರಿರ ಕಾಶಿ ಸುಬ್ಬಯ್ಯ, ಅಡಿಕೇರ ಶಾಂತಿ ಮುತ್ತಪ್ಪ, ಬಲ್ಲಾರಂಡ ರಾಜಪ್ಪ ಮೋಟಯ್ಯ, ಮುಳ್ಳಂಡ ಮಾಯಮ್ಮ ತಮ್ಮಯ್ಯ ಹಾಜರಿದ್ದರು.
ಈಗಿನ ಆಡಳಿತ ಮಂಡಳಿಯನ್ನೇ ಮುಂದುವರಿಸಲು ನಿರ್ಧರಿಸಲಾಯಿತು.