ಗೋಣಿಕೊಪ್ಪ, ಸೆ. ೨೫: ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ ಕುಮಾರ್ ಅವರನ್ನು ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಶಾಲೆ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ದಿವ್ಯ ಮತ್ತು ಸದಸ್ಯರುಗಳು, ಶಾಲೆಯ ಶಿಕ್ಷಕರುಗಳಾದ, ಬಿ.ಆರ್. ಸತೀಶ್, ಟಿ.ಡಿ. ರಾಮನಂದ, ದಮಯಂತಿ ಎ.ಎನ್., ಅನೀತಾ ಕುಮಾರಿ, ಜೋಸ್ಲಿಯಾ ಎಂ.ಟಿ., ಜಯಶ್ರೀ ಎನ್.ಕೆ., ಎಂ.ಸಿ. ಇಂದಿರ, ಶಾರದ, ಸ್ನೇಹ ಕಾವೇರಮ್ಮ, ನಾಗರಾಜು, ಸಿದ್ದರಾಜು, ಮಂಜುಳಾ, ಸುನಿತ ಇದ್ದರು.