ಪೊನ್ನಂಪೇಟೆ, ಸೆ. ೨೫: ದಕ್ಷಿಣ ಕೊಡಗಿನಲ್ಲಿ ಮತ್ತೆ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವೆರೆದಿದ್ದು, ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಆಂಗೋಡು ಎಂಬಲ್ಲಿ ಮತ್ತೊಂದು ಹಸು ಹುಲಿ ದಾಳಿಗೆ ಬಲಿಯಾಗಿದೆ.
ಬಾಚೀರ ಕಾಶಿ ಕುಶಾಲಪ್ಪ ಎಂಬವರಿಗೆ ಸೇರಿದ ಗಬ್ಬದ ಹಸುವನ್ನು ತಾ. ೨೫ ರಂದು ಮಧ್ಯಾಹ್ನ ೪.೩೦ ರ ಸಮಯದಲ್ಲಿ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ತಾ. ೨೪ ರಂದು ಕೂಡ ಈ ಭಾಗದಲ್ಲಿ ಹುಲಿ ದಾಳಿಗೆ ಬಾಚೀರ ಪೆಮ್ಮಯ್ಯ ಎಂಬವರ ಗಬ್ಬದ ಹಸು ಜೀವ ಕಳೆದುಕೊಂಡಿತ್ತು. ಈ ಭಾಗದಲ್ಲಿ ಹುಲಿ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿAಗ್ ನಡೆಸುತ್ತಿದ್ದರು. ಮತ್ತೆ ಹುಲಿಯ ಹಾವಳಿ ಮುಂದುವರೆದಿದ್ದು ಗ್ರಾಮಸ್ಥರು ಆತಂಕ ಗೊಂಡಿದ್ದಾರೆ. ಅರಣ್ಯ ಇಲಾಖೆ ಆದಷ್ಟು ಶೀಘ್ರವಾಗಿ ಹುಲಿಯನ್ನು ಸೆರೆಹಿಹಿಡಿಯುವಂತೆ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಅರಣ್ಯ ವಲಯಾಧಿಕಾರಿ ಶಂಕರ್, ಉಪವಲಯ ಅರಣ್ಯಾಧಿಕಾರಿಗಳಾದ ನಾಗೇಶ್ ಕುಮಾರ್, ದಿವಾಕರ್, ಗಸ್ತು ಅರಣ್ಯಪಾಲಕರಾದ ಮಣಿಕಂಠ, ಸೋಮನ ಗೌಡ ಹಾಗೂ ಅರ್‌ಅರ್‌ಟಿ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದು, ಹುಲಿ ಗುರುತು ಪತ್ತೆಗೆ ಕ್ಯಾಮರಾ ಅಳವಡಿಸಿದ್ದಾರೆ.
ಪಶುವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಅವರು ಹಸುವಿನ ಕಳೆಬರ ಮರಣೋತ್ತರ ಪರೀಕ್ಷೆ ನಡೆಸಿದರು.
-ಚನ್ನನಾಯಕ