ಮಡಿಕೇರಿ, ಸೆ. ೨೫: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ೨೦೨೫-೨೬ನೇ ಸಾಲಿನ ಪ್ರಥಮ ಸಭೆ ತಾ. ೨೩ ರಂದು ಮಡಿಕೇರಿಯ ಶತಮಾನ ಭವನದ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಈ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಮಚಂದ್ರ ಮೂಗೂರ್, ಉಪಾಧ್ಯಕ್ಷರಾದ ಭರತೇಶ್ ಖಂಡಿಗೆ, ಕಾರ್ಯದರ್ಶಿ ಜಗದೀಶ್ ಬಿ.ಕೆ., ಕೋಶಾಧಿಕಾರಿ ರವಿಶಂಕರ್, ಉಪ ಕಾರ್ಯದರ್ಶಿ ಮಂಜುನಾಥ್, ಸದಸ್ಯರುಗಳಾದ ರಾಜಶೇಖರ್, ಅರುಣ್, ಸವಿತಾ, ಶಿವಶಂಕರ್, ಕುಮಾರ ಸುಬ್ರಮಣ್ಯ, ಸುಧೀರ್ ಮಕ್ಕಿ, ಅಶೋಕ್ ಪಿ.ವಿ., ಲಲಿತಾ ರಾಘವನ್, ಮಂಜುಳ, ಶ್ಯಾಮಲಾ ಅವರುಗಳು ಈ ಸಂದರ್ಭ ಹಾಜರಿದ್ದರು.