ಕರಿಕೆ, ಸೆ. ೨೫: ಇಲ್ಲಿಗೆ ಸಮೀಪದ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಇತಿಹಾಸ ಪ್ರಸಿದ್ಧ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಮಹಾಸಭೆಯಲ್ಲಿ ತೀರ್ಮಾನಿಸಿದಂತೆ ಧರ್ಮಾರ್ಥ ನಿಧಿಯಿಂದ ರೂ. ೨ ಲಕ್ಷಗಳ ದೇಣಿಗೆಯನ್ನು ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ದೇವಸ್ಥಾನದ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ ಅವರಿಗೆ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಶೋಕ ಪಿ.ಎಂ., ನಿರ್ದೇಶಕರುಗಳಾದ ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪುಷ್ಪಾವತಿ ವ್ಯಾಪಾರೆ, ಧೀನರಾಜ್ ದೊಡ್ಡಡ್ಕ ಹಾಗೂ ಮುಖ್ಯ ಅರ್ಚಕರಾದ ವೆಂಕಟರಮಣ ಪಾಂಗಣ್ಣಯ್ಯ, ದೇವಸ್ಥಾನದ ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ಜೊತೆ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ವ್ಯವಸ್ಥಾಪಕರಾದ ಕುಶಾಲಪ್ಪ ಕೆ.ಎಸ್., ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯರಾದ ಸುಭಾಶ್ಚಂದ್ರ, ಉದಯಚಂದ್ರ, ಪ್ರವೀಣ್ ಹಾಗೂ ದೇವಸ್ಥಾನದ ಸಮಿತಿಯ ಸದಸ್ಯರುಗಳಾದ ರಕ್ಷಿತ್ ಬಂಗಾರಕೋಡಿ, ಮನೋಜ್ ನಿಡ್ಯಮಲೆ ಉಪಸ್ಥಿತರಿದ್ದರು.