ಕೂಡಿಗೆ, ಸೆ. ೨೫: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹಾಕಿ ವಿಭಾಗದಲ್ಲಿ ಕೊಡಗು ತಂಡವು ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿತು.

ಪುರುಷರ ಅಂತಿಮ ಪಂದ್ಯವು ಕೊಡಗು ಮತ್ತು ಹಾಸನ ತಂಡಗಳ ನಡುವೆ ನಡೆದು ಕೊಡಗು ತಂಡವು ಒಂದು ಗೋಲಿನಿಂದ ಹಾಸನ ತಂಡವನ್ನು ಮಣಿಸಿ ಪ್ರಥಮ ಸ್ಥಾನವನ್ನು ಪಡೆಯಿತು.

ಮಹಿಳೆಯರ ಹಾಕಿ ವಿಭಾಗದಲ್ಲಿ ಕೊಡಗು ಜಿಲ್ಲೆಯ ತಂಡದ ವಿರುದ್ಧ ಮೈಸೂರು ಜಿಲ್ಲಾ ತಂಡವು ಒಂದು ಸೊನ್ನೆ ಗೋಲುಗಳ ಅಂತರದಿAದ ಮೈಸೂರು ತಂಡವು ಪ್ರಥಮ ಸ್ಥಾನವನ್ನು ಗಳಿಸಿತು. ಮೈಸೂರು ತಂಡದ ಪರ ಲಕ್ಷ್ಮಿ ಗೋಲು ಗಳಿಸಿದರು.

ಮೈಸೂರು ವಿಭಾಗ ಮಟ್ಟದ ದಸರಾ ಹಾಕಿ ಕ್ರೀಡಾಕೂಟದಲ್ಲಿ ೮ ಜಿಲ್ಲಾ ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ವಿತರಣೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ಮುರುಳಿ, ಸೇರಿದಂತೆ ಕ್ರೀಡಾ ತರಬೇತಿದಾರರಾದ ಬಿ.ಎಸ್. ವೆಂಕಟೇಶ್, ದೀನಾಮಣಿ, ಎ.ಸಿ. ಮಂಜುನಾಥ, ಬಿ.ಜಿ. ಬಿಂದಯ, ಸುರೇಶ್, ಸುಬ್ಬಯ್ಯ, ಗಣಪತಿ ಸೇರಿದಂತೆ ವಿಜೇತ ತಂಡದ ಕ್ರೀಡಾಕೂಟಗಳು ಹಾಜರಿದ್ದರು.