ಭಾಗಮಂಡಲ, ಸೆ. ೨೫: ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಭಾಗಮಂಡಲ ಗೌಡ ಸಮಾಜಕ್ಕೆ ರೂ. ೩,೪೯,೦೧೧ ಸಹಾಯಧನ ನೀಡಲಾಯಿತು.
ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರು ತಮ್ಮ ಪಾಲಿನ ಡಿವಿಡೆಂಡ್ ಹಣದ ಶೇ. ೨ ಹಣದ ಮೊತ್ತ ರೂಪಾಯಿ ೩,೪೯,೦೧೧/- ಗಳನ್ನು ಭಾಗಮಂಡಲ ನಾಡು ಗೌಡ ಸಮಾಜಕ್ಕೆ ಕೊಡುವಂತೆ ತೀರ್ಮಾನ ಕೈಗೊಂಡಿದ್ದರು.
ಸAಘದ ಆಡಳಿತ ಮಂಡಳಿ ಸಭೆಯಲ್ಲಿ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಡಿ. ಪಳಂಗಪ್ಪ, ಉಪಾಧ್ಯಕ್ಷ ನಿಡ್ಯಮಲೆ ದಾಮೋದರ ಹಾಗೂ ನಿರ್ದೇಶಕರಾದ ಕುದುಪಜೆ ಪ್ರಕಾಶ್ ಮತ್ತು ದೇವಂಗೋಡಿ ಹರ್ಷ ಅವರಿಗೆ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಜೆ. ಸತೀಶ್ ಕುಮಾರ್, ಉಪಾಧ್ಯಕ್ಷ ಕುಯ್ಯಮುಡಿ ಸೀತಾರಾಮ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಚೆಕ್ಕನ್ನು ಹಸ್ತಾಂತರಿಸಿದರು.