ನಾಪೋಕ್ಲು, ಸೆ. ೨೬: ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡುವುದರ ಮೂಲಕ ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಗಮನಹರಿಸಬೇಕು ಎಂದು ನಿವೃತ್ತ ಶಿಕ್ಷಕಿ ಮೂವೆರ ಅನಿಲ ಕಾವೇರಿಯಮ್ಮ ಹೇಳಿದರು.

ಸ್ಥಳೀಯ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಆಶ್ರಯದಲ್ಲಿ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಇರುವ ಮಕ್ಕಳಿಗೆ ಶಿಕ್ಷಣ ನೀಡುವುದು ಸುಲಭದ ಮಾತಲ್ಲ. ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರು ವಿಶೇಷವಾದ ಕಾಳಜಿ ಶ್ರಮ ಪಡಬೇಕಾಗುತ್ತದೆ. ಉತ್ತಮ ಆಡಳಿತ ಮಂಡಳಿ, ಶಿಕ್ಷಕ ವೃಂದದ ಸಹಕಾರ, ಪ್ರೋತ್ಸಾಹವಿದ್ದಲ್ಲಿ ಶಿಕ್ಷಣ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು ಎಂದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಕೋಟೆರ ಪಂಚಮ್ ತಿಮ್ಮಯ್ಯ ಮಾತನಾಡಿ, ಪೋಷಕರು - ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಸಂಬAಧ ಅನ್ಯೋನ್ಯವಾಗಿದ್ದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ದುಡಿದ ಕಾವೇರಿಯಮ್ಮ ಅವರ ಸೇವೆ ಸ್ಮರಣೀಯ ಎಂದರು.

ಮುಕ್ಕಾಟಿರ ವಿನಯ್ ಮಾತನಾಡಿ, ಜನವರಿ ೪ ರಂದು ನಾಪೋಕ್ಲುವಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ರೀಜನಲ್ ಕಾನ್ಫರೆನ್ಸ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಯಶಸ್ವಿ ಸಂಘಟನೆಗೆ ಎಲ್ಲರೂ ತನು, ಮನ, ಧನ ಸಹಾಯ ಮಾಡಬೇಕು ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಯಂಡ ಬಿ. ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಾಂತೀಯ ರಾಯಭಾರಿ ನವೀನ್ ಅಂಬೆಕಲ್, ಲಯನ್ಸ್ ಜೋನ್ ೨ ವಲಯ ಅಧ್ಯಕ್ಷ ನಟರಾಜ್ ಕೆಸ್ತೂರ್, ಜಿಲ್ಲಾ ಸಹ ಕಾರ್ಯದರ್ಶಿ ಲಯನ್ ಸುಮನ್ ಬಾಲಚಂದ್ರ, ಲಯನ್ಸ್ ಜಿಲ್ಲಾ ರಾಯಬಾರಿ ಮೋಹನ್ ದಾಸ್, ಲಯನ್ಸ್ ಎಸ್ಸಿ ಐಪಿ ಟ್ರೈನರ್ ಪ್ರೀತಂ ಪೊನ್ನಪ್ಪ, ಸ್ಥಳೀಯ. ಲಯನ್ಸ್ ಕ್ಲಬ್ ಕಾರ್ಯದರ್ಶಿ ಬನ್ಸಿ ಭೀಮಯ್ಯ ಖಜಾಂಚಿ ವಸಂತ ಮುತ್ತಪ್ಪ, ಲಿಯೋ ಕ್ಲಬ್ ಅಧ್ಯಕ್ಷೆ ಕನ್ನಿಕಾ, ಕಾರ್ಯದರ್ಶಿ ದ್ರುವ ದೇವಯ್ಯ ಹಾಗೂ ಖಜಾಂಚಿ ಅನನ್ಯ ಉಪಸ್ಥಿತರಿದ್ದರು.

ಕಾಂಡAಡ ರೇಖಾ ಪೊನ್ನಣ್ಣ ಪ್ರಾರ್ಥಿಸಿ ಯಂ.ಬಿ. ಕುಟ್ಟಪ್ಪ ಸ್ವಾಗತಿಸಿದರು. ಕುಂಡ್ಯೋಳAಡ ಗಣೇಶ್ ಮುತ್ತಪ್ಪ ಧ್ವಜವಂದನೆ ನೆರವೇರಿಸಿ, ಬಡ್ಡಿರ ನಳಿನಿ ಪುವಯ್ಯ, ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಮಂದಪAಡ ಪುಷ್ಪ ಅತಿಥಿಗಳ ಪರಿಚಯವನ್ನು ಮಾಡಿದರು.