ಚೆಟ್ಟಳ್ಳಿ, ಸೆ. ೨೬: ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ವತಿಯಿಂದ ೧೭ನೇ ವರ್ಷದ ಓಣಂ-೨೦೨೫ ಆಚರಣೆ ತಾ. ೨೮ರ ಭಾನುವಾರ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.
ಪೂರ್ವಾಹ್ನ ೬.೩೦ರಿಂದ ೮.೩೦ರವರೆಗೆ ಪೂಕಳಂ ಸ್ಪರ್ಧೆ ನಂತರ ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾ ಕಾರ್ಯಕ್ರಮ, ೧೨.೩೦ ಗಂಟೆಯಿAದ ಓಣಂ ಸದ್ಯ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪೂಕಳಂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಪ್ರಸಕ್ತ ಸಾಲಿನಲ್ಲಿ ೧೦ ಹಾಗೂ ೧೨ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದೆಂದು ಸಮಿತಿ ತಿಳಿಸಿದೆ.