ಮಡಿಕೇರಿ, ಸೆ. ೨೬ : ಮನುಷ್ಯನ ಆರೋಗ್ಯಕರ ಬೆಳವಣಿಗೆಗೆ ಕ್ರೀಡಾ ಚಟುವಟಿಕೆ ಮುಖ್ಯವಾದುದು ಎಂದು ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಹೇಳಿದರು.
ಮಡಿಕೇರಿ ದಸರಾ ಸಮಿತಿ, ದಸರಾ ಕ್ರೀಡಾ ಸಮಿತಿ ವತಿಯಿಂದ ಹೊಟೇಲ್ ರಾಜ್ದರ್ಶನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಒಳಾಂಗಣ ಕ್ರೀಡೆಗಳಾದ ಚೆಸ್ ಹಾಗೂ ಕೇರಂ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚೆಸ್ ಬುದ್ಧಿವಂತರ ಆಟವಾಗಿದೆ, ಅದರಲ್ಲಿ ಅಂತರರಾಷ್ಟಿçÃಯ ಮಟ್ಟದಲ್ಲಿ ನೋಡಿದರೆ ಭಾರತೀಯರದ್ದೇ ಮೇಲುಗೈ. ಈ ಆಟ ಪ್ರಬುದ್ಧವಾಗಿ ಮುಂದುವರಿಯುತ್ತಿದೆ. ಮಕ್ಕಳು ವಿದ್ಯೆಯೊಂದಿಗೆ ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡೆ ಭಿನ್ನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು. ಚೆಸ್ ಆಟ ಮೆದುಳನ್ನು ಚುರುಕಾಗಿಸುತ್ತದೆ. ಕೇರಂ ಕೂಡ ಚಾಕಚಕ್ಯತೆಯ ಆಟವಾಗಿದೆ. ಇಂತಹ ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ಕ್ರೀಡಾಕೂಟದಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು. ಹಿರಿಯರು ಕೂಡ ಮಕ್ಕಳಂತಾಗಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆಶಿಸಿದರು.
ಶಕ್ತಿ ಪತ್ರಿಕೆ ಸಂಪಾದಕ, ನಗರ ದಸರಾ ಸಮಿತಿ ಗೌರವ ಸಲಹೆಗಾರರಾದ ಜಿ. ಚಿದ್ವಿಲಾಸ್ ಮಾತನಾಡಿ; ಇಂದಿನ ಮಕ್ಕಳು ಮೊಬೈಲ್ಗಳಲ್ಲಿ ಮುಳುಗಿ ಹೋಗಿದ್ದಾರೆ ಎಂಬ ಮಾತನ್ನು ಸುಳ್ಳಾಗಿಸಿ ಮಕ್ಕಳನ್ನು ಇಂತಹ ಕ್ರೀಡಾ ಚಟುವಟಿಕೆಗಳಿಗೆ ಕರೆತಂದಿರುವ ಪೋಷಕರಿಗೆ, ಅಭಿನಂದಿಸಲೇಬೇಕೆAದು ಪ್ರಶಂಸೆಯ ನುಡಿಯಾಡಿದರು. ಪುಟಾಣಿ ಮಕ್ಕಳ ಚಟುವಟಿಕೆ ಬಗ್ಗೆ ಗಂಭೀರತೆಯಿAದ ಕಾಳಜಿವಹಿಸಿ ಬುದ್ಧಿವಂತ ಸತ್ಪçಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ತಾಯಂದಿರಿಗಿದೆ. ಆ ಜವಾಬ್ದಾರಿ ಕಾರ್ಯ ಇಲ್ಲಿ ಕಾಣುತ್ತಿದೆ. ಗಂಭೀರ ಹಾಗೂ ಬುದ್ಧಿವಂತಿಕೆಯ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜನೆ ಮಾಡಿರುವ ಕ್ರೀಡಾ ಸಮಿತಿಯವರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೇವಲ ಅಧ್ಯಕ್ಷನೋರ್ವನಿಂದ ಕಾರ್ಯಕ್ರಮ ಆಯೋಜನೆ ಮಾಡಲು ಸಾಧ್ಯವಿಲ್ಲ, ಕ್ರೀಡಾ ಸಮಿತಿ ಸದಸ್ಯರುಗಳ ಬೆಂಬಲದಿAದ ಕಳೆದ ಮೂರು ವರ್ಷಗಳಿಂದ ಅಧ್ಯಕ್ಷ ಪ್ರದೀಪ್ ಕರ್ಕೇರ ಉತ್ತಮವಾಗಿ ಕ್ರೀಡಾ ಕೂಟವನ್ನು ಆಯೋಜನೆ ಮಾಡಿಕೊಂದು ಬರುತ್ತಿದ್ದಾರೆ. ಅನುದಾನ ಕಡಿಮೆಯಿದ್ದರೂ ಸ್ವಯಂಪ್ರೇರಿತರಾಗಿ ಹಣ ವ್ಯಯಿಸಿ ಆಯೋಜನೆ ಮಾಡುತ್ತಿರುವದು ಹೆಮ್ಮೆಯ ವಿಚಾರವೆಂದು ಹೇಳಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ; ದೈಹಿಕ ಸಾಮರ್ಥ್ಯಕ್ಕಾಗಿ ಮೈದಾನದಲ್ಲಿ ಆಡುವಂತಹ ಹಲವಾರು ಕ್ರೀಡೆಗಳಿವೆ. ಆದರೆ ಚೆಸ್ ಮತ್ತು ಕೇರಂ ಮೆದುಳು ಚುರುಕುಗೊಳಿಸುವಂತಹ ಕ್ರೀಡೆಗಳಾಗಿದ್ದು,ಇಂತಹ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ಕುಮಾರ್ ಮಾತನಾಡಿ; ಮಕ್ಕಳನ್ನು ಕರೆತಂದ ಪೋಷಕರು ಅಭಿನಂದನಾರ್ಹರು. ಮುಂದಿನ ಸಾಲಿನಲ್ಲಿ ಕ್ರೀಡಾ ಸಮಿತಿಯ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸುವದಾಗಿ ಹೇಳಿದರು.
ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಮಾತನಾಡಿ ಕ್ರೀಡಾಸಮಿತಿ ಅಧ್ಯಕ್ಷ ಪ್ರದೀಪ್ ಅಲ್ಪ ಪ್ರಮಾಣದ ಅನುದಾನದಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ಕಳೆದ ಮೂರು ವರ್ಷಗಳಿಂದ ಹಮ್ಮಿಕೊಂಡು ಬರುತ್ತಿದ್ದಾರೆ. ಭಾಗವಹಿಸುವ ಸ್ಪರ್ಧಾಳುಗಳಿಗೆ ಸ್ವಂತ ಹಣ ವ್ಯಯಿಸಿ ಊಟೋಪಚಾರ ಕೂಡ ಮಾಡುತ್ತಿದ್ದಾರೆ, ಕ್ರೀಡಾ ಸಮಿತಿಯ ಕಾರ್ಯ ಮೆಚ್ಚುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಮಾತನಾಡಿ; ಇಲ್ಲಿ ಅಧ್ಯಕ್ಷ ನೆಪ ಮಾತ್ರಕ್ಕೆ ಮಾತ್ರ; ಸಮಿತಿಯ ಎಲ್ಲಾ ಸದಸ್ಯರುಗಳ ಸಹಕಾರದಿಂದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ. ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಹಾಗೂ ನಗರ ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ, ಖಜಾಂಚಿ ಸಬಿತಾ, ನಗರ ಸಭಾ ಸದಸ್ಯರುಗಳಾದ ಸತೀಶ್ ಕುಮಾರ್, ಚಿತ್ರಾವತಿ, ಮೇರಿ ವೇಗಸ್, ದಶ ಮಂಟಪ ಸಮಿತಿ ಅಧ್ಯಕ್ಷ ಬಿಎಂ. ಹರೀಶ್, ದಸರಾ ಸಮಿತಿ ಪದಾಧಿಕಾರಿಗಳಾದ ಪ್ರಭು ರೈ, ಮನು ಮಂಜುನಾಥ್ ಇದ್ದರು. ಸಮಿತಿ ಸದಸ್ಯ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.