ಮಡಿಕೇರಿ, ಸೆ. ೨೬: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಕರಾಟೆಪಟು ಚೆಪ್ಪುಡಿರ ಅರುಣ್ ಮಾಚಯ್ಯ ನೇಮಕಗೊಂಡಿದ್ದಾರೆ. ವಿವಿಧ ಮಂಡಳಿ, ನಿಗಮ, ಪ್ರಾಧಿಕಾರಿಗಳ ನೇಮಕಾತಿಯನ್ನು ಸರಕಾರ ನಡೆಸಿದ್ದು, ಕ್ರೀಡಾ ಪ್ರಾಧಿಕಾರಕ್ಕೆ ಅರುಣ್ ಮಾಚಯ್ಯ ನೇಮಕಗೊಂಡಿದ್ದಾರೆ.
ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿತನದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಕೆಲಸವನ್ನು ಗುರುತಿಸಿ ಪಕ್ಷ ಹಾಗೂ ಜಿಲ್ಲೆಯ ಇಬ್ಬರು ಶಾಸಕರ ಶಿಫಾರಸ್ಸಿನ ಮೇರೆಗೆ ಈ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ. ದೊರೆತ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.
ಕ್ರೀಡೆಗಳಿಗೆ ಮಾನ್ಯತೆ
ಸ್ಥಳೀಯವಾಗಿ ನಡೆಯುವ ಕ್ರೀಡಾಕೂಟಗಳಿಗೆ ಮಾನ್ಯತೆ ದೊರಕಬೇಕು. ಇದಕ್ಕಾಗಿ ಅಧಿಕೃತ ಕ್ರೀಡಾ ಸಂಸ್ಥೆಗಳ ಸ್ಥಾಪನೆಗೆ ಶ್ರಮಿಸುವುದಾಗಿ ಅರುಣ್ ಮಾಚಯ್ಯ ತಿಳಿಸಿದರು. ಕ್ರೀಡಾ ಸಂಸ್ಥೆಗಳು ಕೆಲ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಇದನ್ನು ವಿಸ್ತರಿಸಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇದನ್ನು ಅನುಷ್ಠಾನ ಮಾಡಲಾಗುವುದು. ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕೆಲಸವನ್ನು ಉದ್ದೀಪನಗೊಳಿಸಲು ಮುಂದಾಗಲಾಗುವುದು ಎಂದು ಹೇಳಿದರು.
ಮೈದಾನಗಳಿಗೆ ಕಾಯಕಲ್ಪ
ಜಿಲ್ಲೆಯಲ್ಲಿರುವ ಮೈದಾನಗಳಿಗೆ ಕಾಯಕಲ್ಪ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಅರುಣ್ ಮಾಚಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕ್ರೀಡಾ ತವರೂರು ಕೊಡಗು ಜಿಲ್ಲೆಗೆ ಮೈದಾನದ ಅಗತ್ಯತೆ ಇದೆ. ಇದರೊಂದಿಗೆ ಇರುವ ಮೈದಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾಗಿದೆ. ರಾಜ್ಯ ಕ್ರೀಡಾ ಪ್ರಾಧಿಕಾರವನ್ನು ವ್ಯವಸ್ಥಿತಗೊಳಿಸಿ ಕ್ರೀಡಾ ಕ್ಷೇತ್ರವನ್ನು ಮುಂದಕ್ಕೆ ಕೊಂಡೊಯ್ಯಲಾಗುವುದು. ಮುಂದಿನ ದಿನಗಳಲ್ಲಿ ರಾಷ್ಟç, ಅಂತರರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳು, ತರಬೇತುದಾರರನ್ನು ಆಹ್ವಾನಿಸಿ ಸಭೆ ನಡೆಸಿ ಸಲಹೆ ಪಡೆದು ಹೆಜ್ಜೆಯಿಡಲಾಗುವುದು ಎಂದು ಹೇಳಿದರು.
ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ, ದಕ್ಷಿಣ ಭಾರತ ಕರಾಟೆ ಅಸೋಸಿಯೇಷನ್
ಚೇರ್ಮೆನ್, ರಾಷ್ಟç ಮಟ್ಟದ ತಾಂತ್ರಿಕ ಸಮಿತಿ ಜಂಟಿ ಚೇರ್ಮೆನ್ ಆಗಿರುವ ಅರುಣ್ ಮಾಚಯ್ಯ ಅವರು ವಿಶ್ವ ಕೋಚ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.