ಮಡಿಕೇರಿ, ಸೆ. ೨೬: ಮಡಿಕೇರಿಯ ಗಾಂಧಿ ಮೈದಾನದಲ್ಲಿ ತಾ. ೨೪ ರಂದು ನಡೆದ ಕಾಫಿ ದಸರಾ ಅಂಗವಾಗಿ ಕಾಫಿಯ ವಿವಿಧ ಖಾದ್ಯಗಳ ತಯಾರಿ ಸ್ಪರ್ಧೆಯ ಹಲವು ವಿಭಾಗಗಳಲ್ಲಿ ಭಾಗವಹಿಸಿದ ಸಾರ್ವಜನಿಕರು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಕಾಫಿ ಪಾನೀಯ ವಿಭಾಗದಲ್ಲಿ ವೈಭವಿ ಪ್ರಥಮ, ಪ್ರೀತಿ ದ್ವಿತೀಯ, ಸ್ಮಿತಾ ಬೋಪಯ್ಯ ತೃತೀಯ, ಉಮಾವತಿ ಹಾಗೂ ಕುಕ್ಕೆರ ಶೈಲಾ ತಿಮ್ಮಯ್ಯ ಸಮಾಧಾನಕರ ಬಹುಮಾನ ಗೆದ್ದಿದ್ದಾರೆ.
ಕಾಫಿ ಪುಡ್ಡಿಂಗ್ ವಿಭಾಗದಲ್ಲಿ ಕನ್ನಂಡ ಸುನಿತಾ ಸಂಪತ್ ಪ್ರಥಮ, ವಿಮಲಾ ಮುತ್ತಣ್ಣ ದ್ವಿತೀಯ, ಸಂಧ್ಯಾ ರಾಣಿ ತೃತೀಯ, ಸಮೀರ ಹಾಗೂ ನಿಶಾ ಮೋಹನ್ ಸಮಾಧಾನಕರ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಕಾಫಿ ಬಿಸ್ಕೆಟ್ ವಿಭಾಗದಲ್ಲಿ ವೈಭವಿ ಪ್ರಥಮ, ರಮ್ಯಾ ದ್ವಿತೀಯ, ಮುತ್ತಮ್ಮ ತೃತೀಯ, ಸಂಧ್ಯಾ ರಾಣಿ ಹಾಗೂ ಸ್ಮಿತಾ ಬೋಪಯ್ಯ ಸಮಾಧಾನಕರ ಬಹುಮಾನ ಪಡೆದುಕೊಂಡರು. ಕಾಫಿ ಕೇಕ್ ವಿಭಾಗದಲ್ಲಿ ಸ್ಮಿತಾ ಬೋಪಯ್ಯ ಪ್ರಥಮ, ವೆನೇಸ ದ್ವಿತೀಯ, ಆದಿ ದ್ರವ್ಯ ತೃತೀಯ, ಸಂಗೀತ ಹಾಗೂ ಸರಿತಾ ಅಯ್ಯಪ್ಪ ಸಮಾಧಾನಕರ ಬಹುಮಾನ ಗೆದ್ದಿದ್ದಾರೆ.
ಕಾಫಿ ಚಾಕಲೇಟ್ ವಿಭಾಗದಲ್ಲಿ ಸಂಧ್ಯಾ ರಾಣಿ ಪ್ರಥಮ, ಕನ್ನಂಡ ನಳಿನಿ ಪೊನ್ನಪ್ಪ ದ್ವಿತೀಯ, ಆದಿ ದ್ರವ್ಯ ತೃತೀಯ, ಅನಿಲ ಹಾಗೂ ಅಕ್ಕಮ್ಮ ಪಿ.ಎಸ್ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಕಾಫಿ ಕಪ್ ಕೇಕ್ ವಿಭಾಗದಲ್ಲಿ ಜಯಂತಿ ಬಿಬಿ ಪ್ರಥಮ, ವೆನೇಸ ದ್ವಿತೀಯ, ಚೈತ್ರಾ ತೃತೀಯ, ಕೂಪದಿರ ಪ್ರಮೀಳಾ ಚಿನ್ನಪ್ಪ ಹಾಗೂ ರಂಜಿತಾ ಸಮಾಧಾನಕರ ಬಹುಮಾನ ಪಡೆದುಕೊಂಡರು. ಕಾಫಿ ಬ್ರೌನಿ ವಿಭಾಗದಲ್ಲಿ ಸ್ಮಿತಾ ಬೋಪಯ್ಯ ಪ್ರಥಮ, ಯೋಗ್ಯತಾ ದ್ವಿತೀಯ, ಸುಶಿ ತೃತೀಯ, ರಕ್ಷಿತಾ ಹಾಗೂ ಮುತ್ತಮ್ಮ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.