ಗೋಣಿಕೊಪ್ಪಲು, ಸೆ. ೨೭: ಜಂಜಾಟದಲ್ಲಿರುತ್ತಿದ್ದ ಮಹಿಳೆಯರಿಂದು ‘ರಿಲ್ಯಾಕ್ಸ್ ಮೂಡ್’ಗೆ ಜಾರಿದ್ದರು. ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಪ್ರೌಢಶಾಲಾ ಮೈದಾನದ ಕಾವೇರಿ ಕಲಾವೇದಿಕೆಯಲ್ಲಿ ನಡೆದ ೧೦ನೇ ವರ್ಷದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಸ್ತಿçà ಶಕ್ತಿ ಅನಾವರಣವಾಯಿತು.

ಹೂ ಜೋಡಣೆ, ಬೆಂಕಿ ಇಲ್ಲದ ಅಡುಗೆ, ಮೆಹಂದಿ ಹಾಕುವುದು, ಹಗ್ಗಜಗ್ಗಾಟ, ಮಹಿಳೆಯರ ಸ್ವಉತ್ಪನ್ನ ಮಾರುಕಟ್ಟೆ, ಲೆಮೆನ್ ಮತ್ತು ಸ್ಪೂನ್, ಬಾಂಬ್ ಇನ್ ದ ಸಿಟಿ, ಚೀಲದ ಓಟ, ವೇಗ ನಡಿಗೆ, ಸಾಮೂಹಿಕ ನೃತ್ಯ, ಸಾಮೂಹಿಕ ಜನಪದ ಗೀತೆ, ಛಧ್ಮವೇಶ ಸ್ಪರ್ಧೆಗಳಲ್ಲಿ ಮಹಿಳೆಯರು ಪಾಲ್ಗೊಂಡು ಸೈ ಎನಿಸಿಕೊಂಡರು.

ನಾರಿಯರ ಶಕ್ತಿ ಪ್ರದರ್ಶನಕ್ಕೆ ಹಗ್ಗಜಗ್ಗಾಟ ಸಾಕ್ಷಿಯಾಯಿತು. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡು ಪ್ರತಿಭೆಯನ್ನು ಪ್ರದರ್ಶಿಸಿದರು. ಮೆಹಂದಿ ಹಾಕುವ ಮೂಲಕ ಕೌಶಲ್ಯ ಮೆರೆದರೆ, ಉತ್ಪನ್ನಗಳನ್ನು ಮಾರಾಟ ಮಾಡಿ ವ್ಯಾಪಾರದಲ್ಲೂ ಒಂದು ಕೈ ತೋರಿದರು. ಮಹಿಳೆಯರು ಆಡಿದ ಚೀಲ ಓಟ ಸ್ಪರ್ಧೆ ಮನರಂಜನೆ ನೀಡಿತು. ನಗರ ಸೇರಿದಂತೆ ವಿವಿಧೆಡೆಗಳಿಂದ ಮಹಿಳೆಯರು ಆಗಮಿಸಿ ಪ್ರೋತ್ಸಾಹಿಸಿದರು.

ಮೆರವಣಿಗೆ

ಉಮಾಮಹೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮಹಿಳಾ ದಸರಾ ಸಮಿತಿಯ ಪದಾಧಿಕಾರಿಗಳು ದೇವಾಲಯ ೪ಏಳನೇ ಪುಟಕ್ಕೆ ಆವರಣದಿಂದ ದಸರಾ ಮೈದಾನಕ್ಕೆ ಶಾಲಾ ಮಕ್ಕಳ ಬ್ಯಾಂಡ್‌ಸೆಟ್‌ನೊAದಿಗೆ ಹೆಜ್ಜೆ ಹಾಕುತ್ತಾ ಮೈದಾನ ಪ್ರವೇಶ ಮಾಡಿದರು.

ಕಳಸ ಹೊತ್ತ ಮಹಿಳೆಯರೊಂದಿಗೆ ದೇವಾಲಯದಿಂದ ತಂದ ಜ್ಯೋತಿಯಿಂದ ಮಹಿಳಾ ದಸರಾವನ್ನು ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಉದ್ಘಾಟಿಸಿ ಶುಭ ಕೋರಿದರು.

ಗೃಹ ಬಳಕೆಯ ವಸ್ತುಗಳ ಮಾರಾಟ ಮಳಿಗೆಯನ್ನು ಪೂಜಾ ರವೀಂದ್ರ ಉದ್ಘಾಟಿಸಿದರು. ಮಹಿಳೆಯರ ಕ್ರೀಡಾಕೂಟಕ್ಕೆ ತೀತಿರ ಚೋಂದಮ್ಮ ಚಾಲನೆ ನೀಡಿದರು.

ಸಮಿತಿ ಅಧ್ಯಕ್ಷೆ ಎಂ. ಮಂಜುಳಾ, ಉಪಾಧ್ಯಕ್ಷೆ ಕಡೇಮಾಡ ಕುಸುಮ ಜೋಯಪ್ಪ, ಕಾರ್ಯದರ್ಶಿ ಸಪೂರ ಭಾನು, ಖಜಾಂಜಿ ಸುನೀತ, ಪ್ರಮುಖರಾದ ಪಂಕಜ, ಪುಷ್ಪ, ರಜನಿ, ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳಾದ ಶೀಲಾಬೋಪಣ್ಣ, ಡಿ. ಚಂದನ, ವಾಮನ, ಜಾಸ್ಮಿನ್, ಧನ್ಯ ರವೀಂದ್ರ, ಧನಲಕ್ಷಿö್ಮ, ಗ್ರಾಮ ಪಂಚಾಯಿತಿಯ ಸದಸ್ಯರುಗಳು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. -ಹೆಚ್.ಕೆ. ಜಗದಿ