ಶ್ರೀಮಂಗಲ, ಸೆ. ೨೭: ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘÀದಲ್ಲಿ ಪ್ರಸಕ್ತ ಸಾಲಿನಲ್ಲಿ ರೂ. ೨೩.೧೬ ಕೋಟಿ ದುಡಿಯುವ ಬಂಡವಾಳವಿದ್ದು, ಸದಸ್ಯರಿಗೆ ಒಟ್ಟು ರೂ. ೧೮.೪೩ ಕೋಟಿ ಕೆಸಿಸಿ ಮತ್ತು ಇತರ ಸಾಲ ವಿತರಿಸಲಾಗಿದೆ. ರಸಗೊಬ್ಬರ, ಕ್ರಿಮಿನಾಶಕ, ವ್ಯವಸಾಯೋಪಕರಣದ ಮಾರಾಟ ಸೇರಿ ಒಟ್ಟು ರೂ. ೨.೫೨ ಕೋಟಿ ವ್ಯವಹಾರವಾಗಿದ್ದು ೨೦೨೪- ೨೫ನೇ ಸಾಲಿಗೆ ಸಂಘವು ಒಟ್ಟು ರೂ. ೧೪.೭೨ ಲಕ್ಷ ನಿವ್ವಳ ಲಾಭ ಪಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ. ೭ ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಹೇಳಿದರು.
ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ೧,೫೪೬ ಸದಸ್ಯರು ಇರುವ ಸಂಘದಲ್ಲಿ ಒಟ್ಟು ಷೇರು ಮೊಬಲಗು ರೂ. ೪೨. ೩೪ ಲಕ್ಷ ವಾಗಿದ್ದು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ರೂ. ೨೦.೫೨ ಲಕ್ಷ ಠೇವಣಿ ಇರುತ್ತದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಜಿ. ಕೆ. ಸುಬ್ರಮಣಿ, ನಿರ್ದೇಶಕರಾದ ಕೆ. ಎಂ. ಸುನಿಲ್, ಬಿ. ಕೆ. ನಾಣಯ್ಯ, ಎಂ. ಬಿ. ಮಂಜುನಾಥ್, ಬಿ. ಎಂ. ಸಂಪತ್, ಕೆ. ಬಿ. ಕುಶಾಲಪ್ಪ,ಎ. ಎನ್. ಗಣೇಶ್, ಕೆ. ಆರ್. ಮಧುರಾ, ಕೆ. ಡಿ. ನಂಜಮ್ಮ, ಹೆಚ್. ಎ. ಶಾರದಾ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಹಾಜರಿದ್ದರು.