ಮಡಿಕೇರಿ, ಸೆ. ೨೭: ಮಡಿಕೇರಿಯ ಐತಿಹಾಸಿಕ ದೇವಾಲಯ ಓಂಕಾರೇಶ್ವರ ಮತ್ತು ಸಮುಚ್ಚಯ ದೇವಾಲಯಗಳಾದ ಆಂಜನೇಯ ಹಾಗೂ ಕೋಟೆ ಮಹಾಗಣಪತಿ ದೇಗುಲಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಅಲ್ಲದೆ, ದೇವಾಲಯಗಳಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುತ್ತದೆ ಎಂದು ಓಂಕಾರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ತಿಳಿಸಿದರು. ಇಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಧಾರ್ಮಿಕ ದತ್ತಿ ಇಲಾಖೆಗೆ ಸಂಬAಧಿಸಿದAತೆÀ ಓಂಕಾರೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ೪ಏಳನೇ ಪುಟಕ್ಕೆ ಸಮಿತಿಯು ಶಾಸಕ ಡಾ. ಮಂತರ್ ಗೌಡ ಅವರ ಸಹಕಾರದಲ್ಲಿ ೨೦೨೫ ಮಾರ್ಚ್ ತಿಂಗಳ ಅಂತ್ಯದಲ್ಲಿ ರಾಜ್ಯ ಸರಕಾರದಿಂದ ರಚನೆಯಾಯಿತು
ದೇವಾಲಯವು ಕೊಡಗಿನ ರಾಜ ೨ನೇ ಲಿಂಗರಾಜ ಒಡೆಯರವರಿಂದ ೨೬-೩-೧೮೨೦ ರಂದು ನಿರ್ಮಾಣವಾಯಿತು. ದೇವಾಲಯವು ಕೊಡಗಿನ ಇತಿಹಾಸಕ್ಕೆ ಬೆಸೆದುಕೊಂಡಿದ್ದು, ಮಾತ್ರವಲ್ಲದೆ ಧಾರ್ಮಿಕ ಪ್ರಾಮುಖ್ಯತೆಯನ್ನು ಬಹುವಾಗಿ ಪಡೆದಿದೆ. ಹಾಗಾಗಿ ಜಿಲ್ಲೆಯ ಧಾರ್ಮಿಕ ತಾಣಗಳ ಪೈಕಿ ಶ್ರೀ ಓಂಕಾರೇಶ್ವರ ದೇವಾಲಯವು ಪ್ರಾಮುಖ್ಯತೆ ಪಡೆದಿದೆ ಎಂದು ಅವರು ನುಡಿದರು.
ನೂತನ ಸಮಿತಿ ಉಸ್ತುವಾರಿ ವಹಿಸಿಕೊಂಡ ಬಳಿಕ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದೆ. ಬಳಿಕ ತಾ. ೧೧-೦೬-೨೦೨೫ರಂದು ಓಂಕಾರೇಶ್ವರ ದೇವಾಲಯ, ಆಂಜನೇಯ ದೇವಾಲಯ ಹಾಗೂ ಕೋಟೆ ಗಣಪತಿ ದೇವಾಲಯಗಳ ಚಿನ್ನ, ಬೆಳ್ಳಿ ಹಾಗೂ ಇತರ ಆಭರಣಗಳ ಮೌಲ್ಯಮಾಪನವನ್ನು ಸಮಿತಿಯ ಸದಸ್ಯರುಗಳು, ಅರ್ಚಕ ವೃಂದ, ದೇವಾಲಯದ ಸಿಬ್ಬಂದಿ, ಆರಕ್ಷಕ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಛೇರಿ ಸಿಬ್ಬಂದಿಗಳ, ಸಾರ್ವಜನಿಕರ ಸಮ್ಮುಖದಲ್ಲಿ ನೇರ ವೀಡಿಯೋ ಚಿತ್ರೀಕರಣ ಹಾಗೂ ಛಾಯಾಗ್ರಹಣದೊಂದಿಗೆ ನಡೆಸಲಾಯಿತು. ಕಾರ್ಯ ನಿರ್ವಹಣಾ ಅಧಿಕಾರಿಗಳ ಸಮ್ಮುಖದಲ್ಲಿ ಈ ಸಂಪೂರ್ಣ ಕಾರ್ಯ ನಡೆದಿತ್ತು. ಮೌಲ್ಯಮಾಪನ ಮಾಡಿದ ಸಂದರ್ಭದಲ್ಲಿ ಈ ಕೆಳಕಂಡAತೆ ಆಭರಣಗಳ ವಿವರಗಳು ಕಂಡು ಬಂದಿದೆ.
ಓAಕಾರೇಶ್ವರ ದೇವಾಲಯದಲ್ಲಿ ಚಿನ್ನ ೨೨ ಗ್ರಾಂ ೧೦೦ ಮಿಲಿಗ್ರಾಂ, ಬೆಳ್ಳಿ, ೮೩ ಕೆ.ಜಿ. ೪೭೨ ಗ್ರಾಂ, ಹಿತ್ತಾಳೆ ೪೦ ಕೆ.ಜಿ. ೮೧೦ ಗ್ರಾಂ ಹಾಗೂ ಕಂಚು ೩ ಕೆ.ಜಿ. ಲಭ್ಯವಿದೆ.
ಆಂಜನೇಯ ದೇವಾಲಯದಲ್ಲಿ ಚಿನ್ನ ೧ ಗ್ರಾಂ, ಬೆಳ್ಳಿ ೧೯ ಕೆ.ಜಿ. ೬೦೯ ಗ್ರಾಂ ಮತ್ತು ಕೋಟೆ ಗಣಪತಿ ದೇವಾಲಯದಲ್ಲಿ ಚಿನ್ನ ೧೨೦ ಗ್ರಾಂ ೮೪೦ ಮಿಲಿಗ್ರಾಂ ಹಾಗೂ ಬೆಳ್ಳಿ ೧೦ ಕೆ.ಜಿ. ೨೫೫ ಗ್ರಾಂ. ಅಲ್ಲದೆ, ಮೂರು ದೇವಾಲಯಗಳ ಹುಂಡಿ ಪರ್ಕಾವಣೆ (ಲೆಕ್ಕ ಮಾಡುವ) ಸಂದರ್ಭದಲ್ಲಿ ದೊರೆತ ಚಿನ್ನ ೭ ಗ್ರಾಂ ೭೨೦ ಮಿಲಿಗ್ರಾಂ ಮತ್ತು ಬೆಳ್ಳಿ ೧೮ ಗ್ರಾಂ ೪೫೦ ಮಿಲಿ ಗ್ರಾಂ ಎಂದು ಅಧ್ಯಕ್ಷ ಚುಮ್ಮಿ ದೇವಯ್ಯ ಮಾಹಿತಿಯಿತ್ತರು.
ವ್ಯವಸ್ಥಾಪನಾ ಸಮಿತಿ ಸದಸ್ಯರು ಶಾಸಕರಾದ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ತಾ.೧೮-೮-೨೦೨೫ರಂದು ಧಾರ್ಮಿಕ ದತ್ತಿ ಇಲಾಖಾ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ದೇವಾಲಯಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆÀ ರೂ.೫ ಕೋಟಿಯ ಅಂದಾಜು ಪ್ರಸ್ತಾವನೆ ತಯಾರಿಸಿ, ಅನುದಾನಕ್ಕಾಗಿ ಕೋರಿ ಮನವಿಯನ್ನು ಸಲ್ಲಿಸಲಾಯಿತು. ಇಲಾಖೆಯ ಆಯುಕ್ತರಾದ ಡಾ. ಎಂ.ವಿ. ವೆಂಕಟೇಶ್ ಅವರು ಕೂಡ ಉಪಸ್ಥಿತರಿದ್ದು ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ತಯಾರಿಸಿ ಇಲಾಖೆಗೆ ಸಲ್ಲಿಸಿದರೆ ಹಂತ ಹಂತವಾಗಿ ಸಹಕರಿಸುವುದಾಗಿ ಆಯುಕ್ತರು ಭರವಸೆÀಯಿತ್ತರು. ದೇವಾಲಯದ ವ್ಯವಸ್ಥಾಪನಾ ಸಮಿತಿಯು ಮೂಲ ಸ್ವರೂಪಕ್ಕೆ ಅದರ ಪಾವಿತ್ರ‍್ಯತೆಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಚುಮ್ಮಿ ದೇವಯ್ಯ ಮಾಹಿತಿಯಿತ್ತರು.
ನವಗ್ರಹ ಪ್ರತಿಷ್ಠಾಪನೆ
ತಾ. ೨೭-೭-೨೦೨೫ ರಂದು ಉಚ್ಚಿಲ ಶ್ರೀ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಜ್ಯೋತಿಷಿ ನವನೀತ ಪ್ರಿಯ ಅವರ ಮೂಲಕ ದೇವಾಲಯಗಳ ಅಭಿವೃದ್ಧಿ ವಿಚಾರವಾಗಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ತಾಂಬೂಲ ಪ್ರಶ್ನೆ ಇಡಲಾಗಿತ್ತು ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ಜಿ. ರಾಜೇಂದ್ರ ಮಾಹಿತಿಯಿತ್ತರು.
ಆ ಪ್ರಕಾರ ಆಂಜನೇಯ ದೇವಾಲಯದ ಈಶಾನ್ಯ ಮೂಲೆಯಲ್ಲಿ ನವಗ್ರಹ ಪ್ರತಿಷ್ಠಾಪನೆ ಮಾಡುವಂತೆ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಿದ್ದು, ಈ ಕೆಲಸಕ್ಕೆ ಸಾರ್ವನಿಕರ ಸಹಕಾರದೊಂದಿಗೆ ವ್ಯವಸ್ಥಾಪನಾ ಸಮಿತಿಯು ಸದ್ಯದಲ್ಲೇ ಕಾರ್ಯೋನ್ಮುಖವಾಗಲಿದೆ ಎಂದರು.
ಓAಕಾರೇಶ್ವರ ಹಾಗೂ ಆಂಜನೇಯ ದೇವಾಲಯಗಳಿಗೆ ಹೊಂದಿಕೊAಡಿರುವ ಪ್ರವೇಶ ದ್ವಾರದಲ್ಲಿ ಕಮಾನು ನಿರ್ಮಿಸಲಾಗುವುದು. ಎಡಬದಿಗೆ ಶಿವಲಿಂಗ ಹಾಗೂ ನಂದಿಯ ಮೂರ್ತಿ, ಮಧ್ಯಭಾಗದಲ್ಲಿ ಪಟ್ಟಾಭಿರಾಮ-ಲಕ್ಷ್ಮಣ, ಸೀತೆಯ ವಿಗ್ರಹವಿರಲಿದೆ, ಬಲಭಾಗದಲ್ಲಿ ಕೈಮುಗಿದು ಕುಳಿತಿರುವ ಭಂಗಿಯಲ್ಲಿರುವ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಪ್ರತಿಸ್ಥಾಪಿಸುವಂತೆ ಕಂಡುಬAದಿದೆ. ಇನ್ನುಳಿದಂತೆ ಓಂಕಾರೇಶ್ವರ ದೇವಾಲಯ ಹಾಗೂ ಆಂಜನೇಯ ದೇವಾಲಯದ ಮುಖ ಪ್ರವೇಶದ್ವಾರ, ಪ್ರಾರ್ಥನಾ ಕೇಂದ್ರ, ನವಗ್ರಹ ವೃಕ್ಷೆÆÃದ್ಯಾನ, ಕೆರೆ ಅಂಗಣ ಜೀರ್ಣೋದ್ಧಾರ ಕಾರ್ಯಗಳನ್ನು ಶಾಸ್ತ್ರೀಯವಾಗಿ ನಡೆಸಿದರೆ ಸಮಸ್ತ ವಿಧವಾದ ಶ್ರೇಯೋಭಿವೃದ್ಧಿಗೆ ಅವಕಾಶವಿರುವುದೆಂದು ಪ್ರಶ್ನೆಯಿಂದ ತಿಳಿದು ಬಂದಿರುತ್ತದೆ ಎಂದು ರಾಜೇಂದ್ರ ಮಾಹಿತಿಯಿತ್ತರು. ಈ ಸಂಬAಧ ದೇವಾಲಯದ ಖಾತೆಯಲ್ಲಿರುವ ಹಣದಲ್ಲಿ ನಿರ್ದಿಷ್ಟ್ಪ ಪ್ರಮಾಣವನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಮ್ಮತಿಯಿತ್ತಿದ್ದಾರೆ ಎಂದರು. ಉಳಿದಂತೆ ಕೊಡಗಿನ ದಾನಿಗಳಿಂದಲೂ ಸಂಗ್ರಹಿಸಿ ಸಮಿತಿ ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರು.
ಓಂಕಾರೇಶ್ವರ ಸಂಬAಧಿತ ಆಸ್ತಿ
ವ್ಯವಸ್ಥಾಪನಾ ಸಮಿತಿ ಸದಸ್ಯರೂ ಹಾಗೂ ವಕೀಲರಾದ ಎಂ.ಎ. ನಿರಂಜನ್ ಅವರು ಗೋಷ್ಠಿಯಲ್ಲಿ ಮಾತನಾಡಿ, ದೇವಾಲಯಕ್ಕೆ ಸಂಬAಧಿತ ಅನೇಕ ಆಸ್ತಿಗಳು ಈ ಹಿಂದೆ ಸಕಾಲಿಕವಾಗಿ ಕಾನೂನಾತ್ಮಕವಾಗಿ ಸ್ಪಂದಿಸದಿದ್ದುದರಿAದ ಕೈತಪ್ಪಿ ಹೋಗುತ್ತಿರುವ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಆದರೂ ಈ ಸಂಬAಧ ಇತ್ತೀಚೆಗೆ ಬೆಂಗಳೂರಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಕೂಡ ತಂದಿದ್ದು ಈ ಆಸ್ತಿಗಳನ್ನು ಉಳಿಸಿಕೊಳ್ಳಲು ಅವರೂ ಸಹಕರಿಸುವುದಾಗಿ ತಿಳಿಸಿದ್ದು ಸತತÀ ಪ್ರಯತ್ನ ನಡೆಸಲಾಗುತ್ತಿದೆ ಎಂದು ನಿರಂಜನ್ ಮಾಹಿತಿಯಿತ್ತರು. ಜಿಲ್ಲೆಯ ಕೆ. ನಿಡುಗಣೆಯಲ್ಲಿ ೩೯.೭ ಎಕರೆ, ಹಾಕತ್ತ್ತೂರಿನಲ್ಲಿ ೨೩ ಎಕರೆ ಜಾಗಗಳನ್ನು ದಾನಿಗಳು ಬಹಳ ಹಿಂದೆ ನೀಡಿದ್ದು ಈ ಸಂಬAಧ ಕಾನೂನಾತ್ಮಕ ತೊಡಕುಗಳಿವೆ. ಇದೀಗ ಆ ಬಗ್ಗೆ ನ್ಯಾಯಾಲಯದಲ್ಲಿ ಸಮರ್ಪಕ ಪ್ರತಿನಿಧಿತ್ವದ ಮೂಲಕ ಪ್ರಯತ್ನ ನಡೆಸಲಾಗುತ್ತದೆ. ಈ ಹಿಂದೆ ಸಮರ್ಪಕವಾಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸದೆ ತೀವ್ರ ಸಮಸ್ಯೆ ಎದುರಾಗಿದ್ದು ಬಗೆಹರಿಸಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದರು. ಅಲ್ಲದೆ, ಮಡಿಕೇರಿಯ ಮಹದೇವಪೇಟೆಯಲ್ಲಿಯೂ ಆಸ್ತಿಯೊಂದನ್ನು ಭಾಗಮಂಡಲ, ಪಾಡಿ ಇಗ್ಗುತಪ್ಪ ಹಾಗೂ ಓಂಕಾರೇಶ್ವರ ದೇವಾಲಯಗಳಿಗೆ ದಾನಿಯೊಬ್ಬರು ದಾನ ಮಾಡಿದ್ದು ಅದೂ ಕೂಡ ಈ ಹಿಂದೆ ಪ್ರಯತ್ನ ನಡೆಸದೆ ನೆನೆಗುದಿಗೆ ಬಿದ್ದಿದೆ. ಈ ಸಂಬAಧÀ ಇತ್ತೀಚೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಈ ದಿಸೆಯಲ್ಲಿ ಅವರೂ ಸಹಕರಿಸುವುದಾಗಿ ಭರವಸೆಯಿತ್ತಿದ್ದಾರೆ ಎಂದು ವಕೀಲ ನಿರಂಜನ್ ಮಾಹಿತಿಯಿತ್ತರು,
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ ಹಾಗೂ ಕೆ. ವೀಣಾಕ್ಷಿ ಅವರುಗಳು ಉಪಸ್ಥಿತರಿದ್ದರು.