ಮಡಿಕೇರಿ, ಸೆ. ೨೭: ತಾ. ೨೨ರಿಂದ ಅಕ್ಟೋಬರ್ ೨ರ ನಡುವೆ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಮತ್ತು ಭಯೋತ್ಪಾದಕರು ತಾವು ಪತ್ರಕರ್ತರು, ಮಾಧ್ಯಮದವರೆಂದು ಇತರೆ ದೇಶದ ಗುರುತಿನ ದಾಖಲೆಗಳು ಅಥವಾ ಪಾಸ್ಪೋರ್ಟ್ಗಳನ್ನು ಬಳಸಿಕೊಂಡು ವಿಮಾನ ನಿಲ್ದಾಣಗಳು ಸೇರಿದಂತೆ ಭಾರತದ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದನಾ ಕೃತ್ಯ/ಧಾಳಿಗಳನ್ನು ನಡೆಸುವ ಸಾಧ್ಯತೆ ಹೆಚ್ಚಾಗಿರುವುದರ ಬಗ್ಗೆ ಕೇಂದ್ರ ಸಂಸ್ಥೆಗಳಿAದ ಮಾಹಿತಿ ವಿನಿಮಯವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ವಿಮಾನ ನಿಲ್ದಾಣಗಳು, ಪ್ರಮುಖ ಸೂಕ್ಷö್ಮ ಸ್ಥಾವರ, ಜನಸಂದಣಿ ಪ್ರದೇಶಗಳ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾವಹಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಬೇಕು.
ಐಎಸ್ಡಿ ಕ್ಷೇತ್ರ ಘಟಕಗಳ ಅಹಿತಕರ ಘಟನೆಗಳು ನಡೆಯುವ ಮುಂಚೂಣಿ ಮಾಹಿತಿ ಇದ್ದಲ್ಲಿ ಸಂಗ್ರಹಿಸಿ ಐಎಸ್ಡಿ ಕೇಂದ್ರ ಕಛೇರಿಗೆ ಕೂಡಲೇ ಮಾಹಿತಿ ಸಲ್ಲಿಸಬೇಕೆಂದು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾದ ಕೆ.ಎಂ. ಶಾಂತರಾಜು (ಹೆಚ್ಕ್ಯೂ) ಅವರು ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವಿವಿಧ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.